ಕನಕದಾಸರ ಚಿಂತನೆಗಳು ಸಾರ್ವಕಾಲಿಕ : ಡಾ. ಹನುಮಂತ ಹೇರೂರ್
ಕೊಪ್ಪಳ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯವನ್ನು ನೀಡಿದ ಕನಕ ದಾಸರು ಶತಮಾನದ ಸಂತ, ಮೇರು ಸಾಹಿತಿಯಗಿದ್ದಾರೆ ಎಂದು ಶ್ರೀಮತಿ ಶಾರದಮ್ಮ ಕೋತಬಾಳ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹನುಮಂತ ಹೇರೂರ್ ಅವರು ತಿಳಿಸಿದ್ದಾರೆ. ಶ್ರೀ ಗವಿಸಿದ್ಧೇಶ್ವರ ಪದವಿ
ಕನಕದಾಸರ ಚಿಂತನೆಗಳು ಸರ್ವಕಾಲಿಕ :  ಡಾ. ಹನುಮಂತ ಹೇರೂರ್


ಕನಕದಾಸರ ಚಿಂತನೆಗಳು ಸರ್ವಕಾಲಿಕ :  ಡಾ. ಹನುಮಂತ ಹೇರೂರ್


ಕೊಪ್ಪಳ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಬದುಕಿಗೆ ಮೌಲ್ಯಾಧಾರಿತ ಸಾಹಿತ್ಯವನ್ನು ನೀಡಿದ ಕನಕ ದಾಸರು ಶತಮಾನದ ಸಂತ, ಮೇರು ಸಾಹಿತಿಯಗಿದ್ದಾರೆ ಎಂದು ಶ್ರೀಮತಿ ಶಾರದಮ್ಮ ಕೋತಬಾಳ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಹನುಮಂತ ಹೇರೂರ್ ಅವರು ತಿಳಿಸಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದಿಂದ ಸೋಮವಾರ ಏರ್ಪಡಿಸಿದ್ದ ಕನಕದಾಸರ ಜಯಂತಿಯಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿ, ಕೀರ್ತನೆಗಳು ಹಾಗೂ ಶ್ರೇಷ್ಟ ಸಾಹಿತ್ಯ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಬೆಳಗಿರುವ ದಾಸಶ್ರೇಷ್ಠ ಕನಕದಾಸರ ಚಿಂತನೆಗಳು ಸಾರ್ವಕಾಲಿಕ ಎಂದರು.

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಚನ್ನಬಸವ ಅವರು, ಕನಕದಾಸರ ಜೀವನವೇ ಆದರ್ಶ. ಕನಕದಾಸರ ಜಯಂತಿ ಆಚರಣೆ ಮತ್ತು ಅಧ್ಯಯನದ ಮೂಲಕ ಅವರ ಜೀವನವನ್ನು - ಸಾರ್ಥಕ ಬದುಕನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕು. ಚೇತನಾ ಪ್ರಾರ್ಥಿಸಿದರು. ಡಾ. ಸುಮಲತಾ ಬಿ.ಎಂ. ಅವರು ಸ್ವಾಗತಿಸಿದರು. ಡಾ. ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande