
ಕೋಲಾರ,೧೦ ನವೆಂಬರ್ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅಂತರಗ0ಗೆ ಪತ್ರಿಕೆ ಸಂಪಾದಕ ಎಸ್.ಕೆ. ಚಂದ್ರಶೇಖರ್ ೧೨೪ ಮತ ಗಳಿಸಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ ೨೪೧ ಮತಗಳ ಪೈಕಿ ೨೩೮ ಮತಗಳು ಚಲಾವಣೆಗೊಂಡವು. ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸಂಯುಕ್ತ ವಿಜಯ ಪತ್ರಿಕೆಯ ಸಂಪಾದಕ ವಿ ಮುನಿರಾಜು ೧೫೫ ಮತ ಗಳಿಸಿ ಆಯ್ಕೆಯಾದರು. ಜಿಲ್ಲಾ ಉಪಾಧ್ಯಕ್ಷರಾಗಿ ವಾಸ್ತವ ಕರ್ನಾಟಕ ಪತ್ರಿಕೆ ಸಂಪಾದಕ ಬಂಗಾರಪೇಟೆಯ ಹೆಚ್.ಎಲ್. ಸುರೇಶ್(೧೩೧), ಪಬ್ಲಿಕ್ ಟಿವಿ ವರದಿಗಾರ ಎಸ್.ರವಿಕುಮಾರ್ (೧೧೯) ಮತ್ತು ವಿಜಯ ಕರ್ನಾಟಕ ವರದಿಗಾರ ಮುಳಬಾಗಿಲು ಕೆ.ಪ್ರಕಾಶ್(೧೦೯) ಆಯ್ಕೆಯಾದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಿಪಬ್ಲಿಕ್ ಕನ್ನಡ ಜಿಲ್ಲಾ ವರದಿಗಾರ ಎ.ಜಿ.ಸುರೇಶ್ ಕುಮಾರ್ (೧೨೪) ಮತ ಗಳಿಸಿ ಆಯ್ಕೆಯಾದರು.
ಜಿಲ್ಲಾ ಕಾರ್ಯದರ್ಶಿಗಳಾಗಿ ಸಂಯುಕ್ತ ಕರ್ನಾಟಕ ಬೇತಮಂಗಲ ವರದಿಗಾರ ಜೆ.ಜಿ.ಶ್ರೀನಿವಾಸಮೂರ್ತಿ (೧೨೩), ಕನ್ನಡಪ್ರಭ ವರದಿಗಾರ ಮಾಲೂರಿನ ರಾಜೇಂದ್ರ ವೈದ್ಯ (೧೧೧) ಮತ್ತು ಕೋಲಾರ ಅಗ್ನಿ ಪತ್ರಿಕೆ ಸಂಪಾದಕ ಶಮ್ಗರ್ ಎಸ್ (೧೦೨) ಮತ್ತು ಜಿಲ್ಲಾ ಖಜಾಂಚಿಯಾಗಿ ಟಿವಿ೯ ವರದಿಗಾರ ಬಿ.ಎಲ್.ರಾಜೇಂದ್ರ ಸಿಂಹ(೧೩೩) ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಕೋಲಾರ ಶಕ್ತಿ ಸಂಪಾದಕ ಗೋಪಿಕಾ ಮಲ್ಲೇಶ್ -೧೬೮, ನ್ಯೂಸ್ ೧೮ ಕನ್ನಡ ವರದಿಗಾರ ಜಿ.ರಘುರಾಜ್ (೧೩೭), ಸಂಯುಕ್ತ ಕರ್ನಾಟಕ ವರದಿಗಾರ ಎಸ್. ಸೋಮಶೇಖರ್-೧೩೦, ಪ್ರಜಾಪ್ರಗತಿ ವರದಿಗಾರ ಬಿ.ಎಸ್.ನವೀನಕುಮಾರ್-೧೧೭, ಸಿ.ನ್ಯೂಸ್ ವರದಿಗಾರ ಅರಾಬಿಕೊತ್ತನೂರು ಈಶ್ವರ್ -೧೦೭, ಕೋಲಾರ ಪತ್ರಿಕೆ ವರದಿಗಾರ ಎಂ.ರಮೇಶ್-೯೯, ಕನ್ನಡಪ್ರಭ ಬಂಗಾರಪೇಟೆ ವರದಿಗಾರ ಕೆ.ರಮೇಶ್-೯೬, ಕೆಜಿಎಫ್ ಹೊಸದಿಗಂತ ವರದಿಗಾರ ಸಿ.ಎ.ಮುರಳಿಧರ ರಾವ್-೯೪, ಶ್ರೀನಿವಾಸಪುರದ ವಾಸ್ತವ ಕರ್ನಾಟಕ ವರದಿಗಾರ ಕೆ.ಎಂ.ಸೋಮಶೇಖರ್-೯೪, ಕೋಲಾರದ ವಾರ್ತಾಭಾರತಿ ವರದಿಗಾರ ಸಿ.ವಿ.ನಾಗರಾಜ್-೯೩, ಕೋಲಾರದ ಸಹಾರ ವರದಿಗಾರ ಆಯುಬ್ ಖಾನ್-೯೨, ಶ್ರೀನಿವಾಸಪುರ ಶಕ್ತಿ ಸಂಪಾದಕ ಬಿ.ಕೆ.ಉಪೇಂದ್ರ-೯೦, ಮಾಲೂರು ಅಧಿನಾಯಕ ವರದಿಗಾರ ಸಂಘರ್ಷ-೯೦, ಮತ್ತು ಕೋಲಾರದ ಮಾರ್ಧನಿ ವರದಿಗಾರ ಎನ್.ಸತೀಶ್-೮೭ ಆಯ್ಕೆಯಾಗಿದ್ದಾರೆ.
ಕೋಲಾರ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಹಿರಿಯ ಪತ್ರಕರ್ತ ಪಾ.ಶ್ರೀ.ಅನಂತರಾಮ್ ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕೋಲಾರ ಶಕ್ತಿ ಪತ್ರಿಕೆಯ ಮಾಮಿ ಪ್ರಕಾಶ್ ಕಾರ್ಯ ನಿರ್ವಹಿಸಿದ್ದರು.
ಚಿತ್ರ : ಕೋಲಾರ ಜಿಲ್ಲಾ ಪತ್ರಕರ್ತ ಸಂಘದ ಪದಾಧಿಕಾರಿಗಳು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್