ರೈತರಿಗೆ ಕಬ್ಬಿನ ದರ ಕೊಡಿಸುವುದು ಸರ್ಕಾರದ ಕರ್ತವ್ಯ : ಬಸವರಾಜ ಬೊಮ್ಮಾಯಿ
ಹಾವೇರಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಕಬ್ಬಿಗೆ ನಿಗದಿ ಪಡಿಸಿದ ದರವನ್ನು ರೈತರಿಗೆ ಕೊಡಿಸಲು ಸರಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್
ರೈತರಿಗೆ ಕಬ್ಬಿನ ದರ ಕೊಡಿಸುವುದು ಸರ್ಕಾರದ ಕರ್ತವ್ಯ : ಬಸವರಾಜ ಬೊಮ್ಮಾಯಿ


ಹಾವೇರಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಕಬ್ಬಿಗೆ ನಿಗದಿ ಪಡಿಸಿದ ದರವನ್ನು ರೈತರಿಗೆ ಕೊಡಿಸಲು ಸರಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಕಾರ್ಖಾನೆ ಮಾಲಿಕರು ಕೊಡುವಂತೆ, ಸರಕಾರದ ಆಜ್ಞೆ ಪಾಲನೆ ಆಗುವಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಕಾರ್ಖಾನೆ ಮಾಲೀಕರು ಮುಖ್ಯಮಂತ್ರಿ ಸಭೆಯಲ್ಲಿ ಭಾಗವಹಿಸಿದ್ದರೂ, ಕಾರ್ಖಾನೆ ಮಾಲೀಕರು ಅವರ ಎದರುಗಡೆ ಆಗಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಲಿ. ಕಾರ್ಖಾನೆ ಮಾಲೀಕರಿಗೆ ಕೇವಲ ಹೇಳಿದ್ದಾರೊ ಅಥವಾ ಒಪ್ಪಿಸಿದ್ದಾರೋ ಎಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಎಸ್ ಎಪಿ ಕಾನೂನು ಇದೆ. ನಮ್ಮ ಸರಕಾರ ಇದ್ದಾಗ ಮಾಡಿದ್ದೇವೆ. ಎಸ್. ಎ. ಪಿ ಕಾನೂನಿನಲ್ಲಿ ಬಹಳ ಸ್ಪಷ್ಟವಾಗಿದೆ. ಸಕ್ಕರೆ ಮತ್ತು ಇತರೆ ಉತ್ಪಾದನೆಯ ಖರ್ಚುಗಳು ಎಷ್ಟು. ಲಾಭದಲ್ಲಿ ರೈತನಿಗೆ ಎಷ್ಟು ,ಕಾರ್ಖಾನೆ ಎಷ್ಟು ಅನ್ನುವುದು ಇದೆ. ಎಸ್ ಎಪಿ ಕಾನೂನು ತೆಗೆದು ನೋಡಲು ಮುಖ್ಯಮಂತ್ರಿ ತಯಾರಿಲ್ಲ. ಒಂದು ರೀತಿ ಮುಖ್ಯಮಂತ್ರಿ ಖಾಜಿ ನ್ಯಾಯ ಮಾಡಲು ಹೋಗುತ್ತಿದ್ದಾರೆ. ಖಾಜಿ ನ್ಯಾಯ ಮಾಡಲು ಮುಖ್ಯಮಂತ್ರಿಗಳೇ ಬೇಕಾ ಎಂದು ಪ್ರಶ್ನಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಪ್ರತಿ ಟನ್ ಕಬ್ಬಿಗೆ 2900 ರೂ ಇದ್ದದನ್ನು 3200 ರೂ ಮಾಡಿದ್ದರು. ವಿಧಾನ ಸೌಧದಲ್ಲಿ ಕುಳಿತು ಮುಖ್ಯಮಂತ್ರಿ 50 ರೂ ಹೆಚ್ಚಳ ಮಾಡಿದರು. ಜಿಲ್ಲಾಧಿಕಾರಿಗೆ ಇರುವ ಬದ್ದತೆ ಮುಖ್ಯಮಂತ್ರಿಗೆ ಇಲ್ವಾ. ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಸರಕಾರ ನಿಗದಿ ಮಾಡಿರುವ ದರವನ್ನು ರೈತರಿಗೆ ಕೊಡಿಸುವುದು ಸರ್ಕಾರದ ಕರ್ತವ್ಯ. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಯಾಕೆ ಗಲಾಟೆ ಇಲ್ಲ ಎಂದು ಪ್ರಶ್ನಿಸಿದ ಅವರು, ರಿಕವರಿ ಟೆಸ್ಟ್ ಕೂಡ ಮಾಡುವುದು ರಾಜ್ಯ ಸರಕಾರ. ರಿಕವರಿ ಪರೀಕ್ಷೆಯನ್ನೂ ಕೂಡ ಪಾರದರ್ಶಕವಾಗಿ ಮಾಡಲಿ, ಬೆಳಗಾವಿ , ವಿಜಾಪುರ ಜಿಲ್ಲಾಧಿಕಾರಿ ಕೆಲಸ ಮಾಡಿದಂತೆ ಹಾವೇರಿ ಜಿಲ್ಲಾಧಿಕಾರಿ ಕೆಲಸ ಮಾಡಲಿ, ರಾಜಕೀಯವಾಗಿ ಡಿಸಿಯವರಿಗೆ ಹೇಳುವವರು ಕೇಳುವವರು ಇಲ್ವಾ. ರಾಜ್ಯ ಸರಕಾರಕ್ಕೆ ತೆರಿಗೆ ಬರುತ್ತದೆ, ಆ ಪ್ರಕಾರ ನ್ಯಾಯ ಕೊಡಿಸಲಿ ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande