ಬಿಹಾರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉದ್ಯೋಗ : ಜೈರಾಮ್ ರಮೇಶ್
ನವದೆಹಲಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಹಾಮೈತ್ರಿ ಸರ್ಕಾರ ರಚನೆಯಾದರೆ ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಮಹಿಳೆಯರಿಗೆ ತಿಂಗಳಿಗೆ ₹2,500 ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ. ಮಹ
Ramesh


ನವದೆಹಲಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಹಾಮೈತ್ರಿ ಸರ್ಕಾರ ರಚನೆಯಾದರೆ ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ಮಹಿಳೆಯರಿಗೆ ತಿಂಗಳಿಗೆ ₹2,500 ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಮಹಾಮೈತ್ರಿಯ 20 ಅಂಶಗಳ ಖಾತರಿಯಲ್ಲಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ₹500 ಗ್ಯಾಸ್ ಸಿಲಿಂಡರ್‌, ಮಹಿಳೆಯರಿಗೆ ಉಚಿತ ಬಸ್ ಸೇವೆ, ಜೀವಿಕಾ ದೀದಿಗೆ ₹30,000 ಸಂಬಳ ಮತ್ತು ವೃದ್ಧರಿಗೆ ₹1,500 ಪಿಂಚಣಿ ಸೇರಿವೆ.

ಇದಲ್ಲದೆ ರೈತರಿಗೆ ಖಾತರಿಯ ಬೆಂಬಲ ಬೆಲೆ, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ, ಪರಿಶಿಷ್ಟ ಜಾತಿ–ಪಂಗಡ ಪ್ರಕರಣಗಳಿಗೆ ವಿಶೇಷ ನ್ಯಾಯಾಲಯಗಳು ಮತ್ತು ಸಹಾರಾ ಹೂಡಿಕೆದಾರರ ಹಣ ಮರುಪಡೆಯಲು ವಿಶೇಷ ತನಿಖಾ ತಂಡ ರಚನೆ ಮಾಡುವುದಾಗಿ ಅವರು ಹೇಳಿದರು.

ಪತ್ರಕರ್ತರಿಗೆ ಹಾಸ್ಟೆಲ್ ವಸತಿ ಹಾಗೂ ಉಚಿತ ಚಿಕಿತ್ಸೆ, ವಕೀಲರಿಗೆ ಜೀವ ಮತ್ತು ಆರೋಗ್ಯ ವಿಮೆ ನೀಡುವುದೂ ಈ ಯೋಜನೆಗಳಲ್ಲಿ ಸೇರಿದೆ ಎಂದು ರಮೇಶ್ ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande