ಕೊಪ್ಪಳ : ನವೆಂಬರ್ 14 ಮತ್ತು 15 ರಂದು ಜಿಪಿಎಸ್ ವಿಶೇಷ ಅಭಿಯಾನ-ಸಿಇಒ ವರ್ಣಿತ್ ನೇಗಿ
ನಾನಾ
ಕೊಪ್ಪಳ : ನವೆಂಬರ್ 14 ಮತ್ತು 15 ರಂದು ಜಿಪಿಎಸ್ ವಿಶೇಷ ಅಭಿಯಾನ-ಸಿಇಒ ವರ್ಣಿತ್ ನೇಗಿ


ಕೊಪ್ಪಳ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ವಸತಿ ಯೋಜನೆಯ ಮನೆಗಳಿಗೆ ಗ್ರಾಮ ಪಂಚಾಯತಿಗಳಲ್ಲಿ ಜಿ.ಪಿ.ಎಸ್ ಅಳವಡಿಸುವ ವಿಶೇಷ ಅಭಿಯಾನವನ್ನು ನವೆಂಬರ್ 14 ಮತ್ತು ನ. 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.

ವಸತಿ ಯೋಜನೆಯಡಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಹಾಗೂ ಪ್ರತಿಯೊಬ್ಬ ಫಲಾನುಭವಿಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ನೋಟಿಸ್ ಜಾರಿ ಮಾಡಿ ಮನೆಗಳನ್ನು ಪೂರ್ಣಗೊಳಿಸಬೇಕಾಗಿದೆ. 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯಲ್ಲಿ 33,083 ಗುರಿ ನಿಗದಿಯಾಗಿದ್ದು, ಇದರಲ್ಲಿ 14,773 ಫಲಾನುಭವಿಗಳ ಅನುಮೋದನೆ, 11,006 ಪ್ರಥಮ ಕಂತಿನ ಅನುದಾನ ಪಾವತಿ, 1920 ಪ್ರಗತಿಯಲ್ಲಿರುವ ಮನೆಗಳು ಮತ್ತು 9086 ಪ್ರಾರಂಭಿಸದೇ ಇರುವ ಮನೆಗಳು ಒಳಗೊಂಡಿವೆ. ಜಿಲ್ಲೆಯಲ್ಲಿ ಎಂಪಿಕ್ ವರದಿ ಪ್ರಕಾರ ಪ್ರಾರಂಭಿಸದೇ ಇರುವ ಮನೆಗಳು 4323, ತಳಪಾಯ ಹಂತದಲ್ಲಿರುವ 4978, ಲಿಂಟಲ್ ಹಂತದಲ್ಲಿರುವ 4889 ಹಾಗೂ ಛಾವಣಿ ಹಂತದ 1827 ಮನೆಗಳು ಪ್ರಗತಿಯಲ್ಲಿವೆ.

ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ವಸತಿ ಅನುಷ್ಟಾನಾಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಮನೆಗಳ ಪ್ರಗತಿ ಪರಿಶೀಲನೆ ನಡೆಸುವಂತೆ ನಮ್ಮ ಜಿಲ್ಲೆಗೆ ನಿಗಧಿಪಡಿಸಿದ (ಪ್ರಗತಿ ವರದಿ ಆಧಾರಿತ) ಗುರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿಸಲು ಹಾಗೂ ವಿವಿಧ ವಸತಿ ಯೋಜನೆಗಳಡಿ 2010-11ನೇ ಸಾಲಿನಿಂದ 2024-25ನೇ ಸಾಲಿನವರೆಗೆ ಪೂರ್ಣಗೊಳ್ಳದೇ ಬಾಕಿ ಇರುವ ಎಲ್ಲಾ ಮನೆಗಳನ್ನು ಪೂರ್ಣಗೊಳಿಸಲು ವಸತಿ ಅನುಷ್ಮಾನಾಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ.

ಈ ಪಯುಕ್ತ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಪ್ರಗತಿಯಲ್ಲಿರುವ ಮನೆಗಳನ್ನು (ಲಿಂಟಲ್ ಮತ್ತು ರೂಫ್) ಹಾಗೂ 2021-22 ರಿಂದ 2024-25ನೇ ಸಾಲಿನಲ್ಲಿ ಪ್ರಾರಂಭಿಸದೇ ಇರುವ ಮನೆಗಳನ್ನು ಪ್ರಾರಂಭಿಸಲು ನವೆಂಬರ್ 14 ಮತ್ತು ನ. 15ರ ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಜಿಪಿಎಸ್ ಅಭಿಯಾನದ ಮುಂಚಿತವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಂಗೂರ ಸಾರುವ ಮೂಲಕ ಪ್ರಚಾರ ಪಡಿಸಬೇಕು. ಖುದ್ದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಮನೆಗಳ ಜಿಪಿಎಸ್ ಅಳವಡಿಸಬೇಕು. ಪ್ರಾರಂಭಿಸದೇ ಇರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ, ನೋಟಿಸ್ ಜಾರಿ ಮಾಡಿ ಜಿ.ಪಿ.ಎಸ್ ಛಾಯಾಚಿತ್ರದೊಂದಿಗೆ ವರದಿ ಸಲ್ಲಿಸಬೇಕು.

ನಾನಾ ಹಂತದಲ್ಲಿರುವ ಎಲ್ಲಾ ಮನೆಗಳನ್ನು ಕಡ್ಡಾಯಾವಾಗಿ ಶೇ. 100ರಷ್ಟು ಜಿ.ಪಿ.ಎಸ್ ಅಳವಡಿಸಬೇಕು. ಅತೀ ಕಡಿಮೆ ಪ್ರಗತಿ ಸಾಧಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಗೆ ಖುದ್ದಾಗಿ ಹಾಜರಾಗಿ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತ್ ಕಾರ್ಯಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande