
ಹುಬ್ಬಳ್ಳಿ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಮಧುಮೇಹಿಗಳನ್ನು ತೊಂದರೆಗೊಳಿಸುವ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಲು ಬೆಂಡೆಕಾಯಿ ಸಹಕಾರಿ ಎನ್ನಲಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೆಂಡೆಕಾಯಿ ಸೂಪ್ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಿಶೇಷವಾಗಿ ಮಧುಮೇಹ ನಿಯಂತ್ರಣಕ್ಕೆ ಸಹಾಯಕವಾಗಿದೆ.
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಹೆಚ್ಚಿದ ಈರುಳ್ಳಿ, ಎರಡು ಕಪ್ ತೊಳೆದು ಹೆಚ್ಚಿದ ಬೆಂಡೆಕಾಯಿ, ಮೂರು ಕಪ್ ಟೊಮೆಟೊ, ಒಂದು ಕಪ್ ದಪ್ಪ ಮೆಣಸಿನಕಾಯಿ, ಒಂದು ಕಪ್ ಬೇಯಿಸಿದ ಮುಸುಕಿನ ಜೋಳ, ಒಂದು ಟೀ ಚಮಚ ಕಪ್ಪು ಮೆಣಸು, ಉಪ್ಪು ರುಚಿಗೆ ತಕ್ಕಷ್ಟು ಮತ್ತು ನಾಲ್ಕು ಕಪ್ ನೀರು.
ತಯಾರಿಸುವ ವಿಧಾನ:
ಮೊದಲಿಗೆ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಈರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಬಳಿಕ ಬೆಂಡೆಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಮುಸುಕಿನ ಜೋಳ, ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಅಗತ್ಯವಿರುವಷ್ಟು ನೀರು ಸೇರಿಸಿ ಬೆಂಡೆಕಾಯಿ ಮೃದುವಾಗುವವರೆಗೆ ಕುದಿಸಿದರೆ ರುಚಿಕರ ಬೆಂಡೆಕಾಯಿ ಸೂಪ್ ಸವಿಯಲು ಸಿದ್ಧವಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa