
ಗದಗ, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಗದಗ ನಗರದ ದಿ. ಗದಗ ಕೋ ಆಪ್ ಕಾಟನ್ ಸೇಲ್ ಸೋಸಾಯಿಟಿ ಲಿ. ಆವರಣದಲ್ಲಿ ಭಾರತೀಯ ಹತ್ತಿ ನಿಗಮ ನಿಯಮಿತ(ಸಿಸಿಐ) ಹುಬ್ಬಳ್ಳಿ ಶಾಖೆ ವತಿಯಿಂದ ಹತ್ತಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ ದೊರೆಯಿತು.
ಸಂಘದ ಅಧ್ಯಕ್ಷ ಆರ್.ಎಂ. ಮೂಲಿಮನಿ ಅವರು ಖರೀದಿ ಕೇಂದ್ರವನ್ನು ಉದ್ಘಾಟಿಸಿದರು. ನಿರ್ದೇಶಕರಾದ ಎಂ.ಆರ್. ಪಾಟೀಲ, ಕೆ.ಎಚ್. ಪಾಟೀಲ ಮತ್ತು ಸರ್ವ ಸದಸ್ಯರು, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಯಾಳಗಿಶೆಟ್ಟರ ಮತ್ತು ಸಿಬ್ಬಂದಿ ವರ್ಗ ಹಾಗೂ ಭಾರತೀಯ ಹತ್ತಿ ನಿಗಮ ನಿಯಮಿತ(ಸಿ ಸಿ ಐ) ಅಧಿಕಾರಿ ಜಿ. ರಮೇಶ ಸೇರಿ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP