
ಕೋಲಾರ, ೧೦ ನವೆಂಬರ್ (ಹಿ.ಸ) :
ಆ್ಯಂಕರ್ : ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ.೨,೭೦,೦೦೦/- ಬೆಲೆ ಬಾಳುವ ೦೫ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನವೆ0ಬರ್ ೦೫ ರಂದು ಎನ್.ಜಿ.ಹುಲ್ಕೂರು ಗ್ರಾಮದ ವಾಸಿ ಹರೀಶ್ ಅವರು ಎನ್.ಜಿ.ಹುಲ್ಕೂರು ಗೇಟ್ ಬಳಿ ಇರುವ ಕೃಷ್ಣಮೂರ್ತಿ ರವರ ಮನೆಯ ಮುಂದೆ ನಿಲ್ಲಿಸಿದಂತಹ ತನ್ನ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಡಿವೈಎಸ್ಪಿ ವಿ.ಲಕ್ಷö್ಮಯ್ಯ ರವರ ಮಾರ್ಗದರ್ಶನದಲ್ಲಿ ಬೇತಮಂಗಲ ಸಿಪಿಐ ವೈ.ಆರ್.ರಂಗಶಾಮಯ್ಯ ರವರ ನೇತೃತ್ವದಲ್ಲಿ ಪಿಎಸ್‌ಐ ಗುರುರಾಜ ಚಿಂತಾಕಲ ಮತ್ತು ಅವರ ತಂಡದವರು ತಮಿಳುನಾಡು ರಾಜ್ಯದÀ ವೆಲ್ಲೂರು ತಾಲ್ಲೂಕಿನ ವಾಸಿ ಕೆ.ಕುಮಾರ್ (೨೪ ವರ್ಷ) ಮತ್ತು ಗುಬೇಂದ್ರನ್ (೨೦ವರ್ಷ) ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈಗಾಗಲೇ ೦೪ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದ್ದು, ಆರೋಪಿಗಳ ಕಡೆಯಿಂದ ಸುಮಾರು ರೂ.೨,೭೦,೦೦೦/- ಮೌಲ್ಯದ ೦೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಬೇತಮಂಗಲ ಪಿಎಸ್‌ಐ ಗುರುರಾಜ ಚಿಂತಾಕಲ, ಸಿಬ್ಬಂದಿ ಮಂಜುನಾಥ, ಸೌಂದರ್‌ರಾಜ್, ಸೋಮಶೇಖರ ಪುಟಾಣಿ ಮತ್ತು ಜೀಪ್ ಚಾಲಕ ಮುರುಳಿ ರವರುಗಳ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ : ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸರು ಕಳುವಾಗಿದ್ದ ೦೫ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್