ಬಳ್ಳಾರಿ ವಿನಾಯಕ ನಗರದ ಬಾಲಕ ಕಾಣೆ
ಬಳ್ಳಾರಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ನಗರದ ಹೊಸಪೇಟೆ ರಸ್ತೆಯ ವಿನಾಯಕ ನಗರದ ರಂಗ ಮೆಡಿಕಲ್ ಸ್ಟೋರ್ ಹತ್ತಿರ ನಿವಾಸಿ ಅರುಣ್ ಕುಮಾರ್.ಬಿ(14) ಚೆಳ್ಳಗುರ್ಕಿಯ ಗಾಂಧಿತತ್ವ ವಸತಿ ಶಾಲೆಯ 08 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಸರಾ ಹಬ್ಬದ ರಜೆಗೆ ಮನೆಗೆ ಬಂದು ಮರಳಿ ನ.03 ರಂದು ಶಾಲ
ಬಳ್ಳಾರಿ : ವಿನಾಯಕ ನಗರದ ಬಾಲಕ ಕಾಣೆ


ಬಳ್ಳಾರಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ನಗರದ ಹೊಸಪೇಟೆ ರಸ್ತೆಯ ವಿನಾಯಕ ನಗರದ ರಂಗ ಮೆಡಿಕಲ್ ಸ್ಟೋರ್ ಹತ್ತಿರ ನಿವಾಸಿ ಅರುಣ್ ಕುಮಾರ್.ಬಿ(14) ಚೆಳ್ಳಗುರ್ಕಿಯ ಗಾಂಧಿತತ್ವ ವಸತಿ ಶಾಲೆಯ 08 ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ದಸರಾ ಹಬ್ಬದ ರಜೆಗೆ ಮನೆಗೆ ಬಂದು ಮರಳಿ ನ.03 ರಂದು ಶಾಲೆಗೆ ಹೋಗುವುದಾಗಿ ಹೇಳಿ ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.

ಚಹರೆ ಗುರುತು :

ಅಂದಾಜು 4 ವರೆ ಅಡಿ ಎತ್ತರ, ಕೋಲು ಮುಖ, ಬಿಳಿ ಮೈಬಣ್ಣ, ಕಪ್ಪು ಕೂದಲು ಹೊಂದಿರುತ್ತಾನೆ. ಹೊಟ್ಟೆಯ ಬಲಭಾಗದಲ್ಲಿ ಸುಟ್ಟ ಹಳೆಯ ಗಾಯದ ಗುರುತು ಇರುತ್ತದೆ.

ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಹಿಂಬದಿ ಅರುಣ್ ಎಂದು ಇಂಗ್ಲೀಷ್ ಅಕ್ಷರದಲ್ಲಿ ಪ್ರಿಂಟ್ ಇದೆ ಹಾಗೂ ನೇವಿ ಬ್ಲೂ ಬಣ್ಣದ ನೈಟ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಭಾಷೆ, ಮಾತನಾಡುತ್ತಾನೆ.

ಬಾಲಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande