ದೇವಸ್ಥಾನ ಪೂಜಾರಿಯ ಬರ್ಬರ ಹತ್ಯೆ
ವಿಜಯಪುರ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಹಳೆ ವೈಷಮ್ಯ ಹಿನ್ನೆಲೆ ದೇವಸ್ಥಾನದ ಪೂಜಾರಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಅರಕೇರಿ ಬಳಿ ಅಮೋಘಸಿದ್ದ ದೇವಸ್ಥಾನದ ಬಳಿ ನಡೆದಿದೆ. ಅಮಸಿದ್ದ ಬಿರಾದಾರ ಹತ್ಯೆಯಾಗಿರುವ ಪೂಜಾರಿ. ಇನ್ನು ದುಷ್ಕರ್ಮಿಗಳು ಅಮಸಿ
ಹತ್ಯೆ


ವಿಜಯಪುರ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಹಳೆ ವೈಷಮ್ಯ ಹಿನ್ನೆಲೆ ದೇವಸ್ಥಾನದ ಪೂಜಾರಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ತಾಲ್ಲೂಕಿನ ಅರಕೇರಿ ಬಳಿ ಅಮೋಘಸಿದ್ದ ದೇವಸ್ಥಾನದ ಬಳಿ ನಡೆದಿದೆ.

ಅಮಸಿದ್ದ ಬಿರಾದಾರ ಹತ್ಯೆಯಾಗಿರುವ ಪೂಜಾರಿ. ಇನ್ನು ದುಷ್ಕರ್ಮಿಗಳು ಅಮಸಿದ್ದನ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದು ಪರಾರಿ ಆಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande