ಬಿಐಟಿಎಂ: ಇಂಕ್ಯುಬೇಶನ್ ಕುರಿತು ಕಾರ್ಯಾಗಾರ
ಬಳ್ಳಾರಿ, 10 ನವೆಂಬರ್ (ಹಿ.ಸ.) : ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ನಗರದ ಅಲ್ಲೀಪುರದ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್ (ಬಿಐಟಿಎಂ) ಕಾಲೇಜು ಸಭಾಂಗಣದಲ್ಲಿ ಇಂಕ್ಯುಬೇಶನ್ ಯ
ಬಿಐಟಿಎಂ: ಇಂಕ್ಯುಬೇಶನ್ ಕುರಿತು ಕಾರ್ಯಾಗಾರ


ಬಿಐಟಿಎಂ: ಇಂಕ್ಯುಬೇಶನ್ ಕುರಿತು ಕಾರ್ಯಾಗಾರ


ಬಳ್ಳಾರಿ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಆರ್‌ಎಎಂಪಿ ಯೋಜನೆಯಡಿ ನಗರದ ಅಲ್ಲೀಪುರದ ಬಳ್ಳಾರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್ (ಬಿಐಟಿಎಂ) ಕಾಲೇಜು ಸಭಾಂಗಣದಲ್ಲಿ ಇಂಕ್ಯುಬೇಶನ್ ಯೋಜನೆ ಕುರಿತು ಸೋಮವಾರ ಒಂದು ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿ ಇನ್ಸಿ್ಟಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಘವೇಂದ್ರ ಜೋಷಿ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಬಿಐಟಿಎಂ ಕಾಲೇಜು ವತಿಯಿಂದ ಒಟ್ಟು 12 ಇಂಕ್ಯೂಬೇಶನ್ ಚಟುವಟಿಕೆಗಳ ಕುರಿತು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗರಿಷ್ಠ ರೂ.03 ಲಕ್ಷದಂತೆ ಪ್ರೋತ್ಸಾಹಧನ ಪಡೆದಿದೆ ಎಂದು ಹೇಳಿದರು.

ಯುವ ಪೀಳಿಗೆಯು ಹೊಸ ವಿಷಯಗಳ ಮೇಲೆ ಅನ್ವೇಷಣೆ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಇಂಕ್ಯುಬೇಶನ್ ಸೌಲಭ್ಯಗಳು, ಯಶಸ್ಸಿನ ಕಥೆಗಳ ಬಗ್ಗೆ ಅರಿವು ಮೂಡಿಸಲಾಯಿತು ಹಾಗೂ ಉದ್ಯಮಿಗಳು ತಮ್ಮ ಅನುಭವ ಮತ್ತು ಅನಿಸಿಕೆ ಹಂಚಿಕೊ0ಡರು.

ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್.ಬಿ., ಎಐಎಂಎಲ್ ಹೆಚ್‌ಓಡಿ ಡಾ.ಬಿ.ಎಂ.ವಿದ್ಯಾವತಿ, ಇನೊವೇಷನ್ ಸೆಂಟರ್ ಹೆಚ್ ಬ್ರೀಕ್ಸ್ ಡಾ.ಮಲ್ಲಿಕಾರ್ಜುನ.ಎ., ಪ್ರಾಧ್ಯಾಪಕಿ ಡಾ.ರೇಣುಕ ಸಾಗರ್, ಸಹಾಯಕ ಪ್ರಾಧ್ಯಾಪಕ ಜಯ ಪ್ರಕಾಶ್, ರಾಯಲ್‌ಗ್ ಇಂಡಸ್ಟಿçÃಸ್‌ನ ಸಂಸ್ಥಾಪಕ ಹಾಗೂ ನಿರ್ದೇಶಕ ರಾಯಮಂಡ್ ಇರುದಯರಾಜ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande