
ಹೊಸಪೇಟೆ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28 ನೇ ಸಾಲಿಗೆ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಹಾಗೂ ಚುನಾವಣಾಧಿಕಾರಿ ಧನಂಜಯಪ್ಪ.ಬಿ. ತಿಳಿಸಿದ್ದಾರೆ.
ಅಕ್ಟೋಬರ್.30 ರಂದು ಅಂತಿಮ ಚುನಾವಣಾ ಕಣದಿಂದ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಒಟ್ಟು ಅಭ್ಯರ್ಥಿಗಳಲ್ಲಿ ಕಾರ್ಯಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಐದು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸ್ವಇಚ್ಛೆಯಿಂದ ಹಿಂಪಡೆದಿರುತ್ತಾರೆ. ಅಂತಿಮ ಕಣದಲ್ಲಿ ಉಪಾಧ್ಯಕ್ಷ ಸ್ಥಾನದಲ್ಲಿರುವ ಐವರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರು ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯಕಾರಿ ಸ್ಥಾನ : 1.ವೆಂಕೋಬ ನಾಯಕ. (ಅವಿರೋಧ ಆಯ್ಕೆ), ಜಿಲ್ಲಾ ಅಧ್ಯಕ್ಷ ಸ್ಥಾನ : 1.ಪಿ.ಸತ್ಯನಾರಾಯಣ. (ಅವಿರೋಧ ಆಯ್ಕೆ), ಜಿಲ್ಲಾ ಉಪಾಧ್ಯಕ್ಷ ಸ್ಥಾನ : 1.ಬಿ.ಬಸವರಾಜ, 2.ಸಿ.ಕೆ.ನಾಗರಾಜ, 3.ಮಂಜುನಾಥ, 4.ಡಿ.ರುದ್ರಪ್ಪ. 5. ಟಿ.ಬಿ.ರಾಜ (ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನ : 1.ಕೆ.ಲಕ್ಷ್ಮಣ. (ಅವಿರೋಧ ಆಯ್ಕೆ), ಜಿಲ್ಲಾ ಕಾರ್ಯದರ್ಶಿ ಸ್ಥಾನ : 1.ಸುರೇಶ್ ಚೌವ್ಹಾಣ್, 2.ಎಂ.ರವಿಕುಮಾರ್.(ಅವಿರೋಧ ಆಯ್ಕೆ), ಜಿಲ್ಲಾ ಕಾರ್ಯಕಾರಿ ಸ್ಥಾನ : 1.ಸಿ.ಶಿವಾನಂದ, 2.ಭೀಮರಾಜ, 3.ಅನಂತ ಪದ್ಮನಾಭ ರಾವ್, 4.ಬಿ.ಕುಮಾರಸ್ವಾಮಿ, 5.ಸಂಜಯಕುಮಾರ್, 6.ವೀರೇಶ್ವರ.ಎಂ.ಬಿ, 7.ವೀರೇಶ್ ಅಂಗಡಿ, 8.ಪಿ.ಶ್ರೀನಿವಾಸಲು, 9.ಇಂದಿರಾ ಕಲಾಲ್, 10.ವೀರೇಂದ್ರ ನಾಗಲದಿನ್ನಿ. 11.ರಾಮ್ ಪ್ರಸಾದ್ ಗಾಂಧಿ, 12.ಹೆಚ್.ವೆಂಕಟೇಶ್, 13.ಕೆ.ಬಿ.ಖವಾಸ್, 14.ಅನಂತ ಜೋಷಿ, 15.ಎಸ್.ಎಂ.ಬಸವರಾಜ (ಅವಿರೋಧ ಆಯ್ಕೆ) ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್