ಸಿರುಗುಪ್ಪ ನಗರಸಭೆ: ನಾನಾ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
ಬಳ್ಳಾರಿ, 01 ನವೆಂಬರ್ (ಹಿ.ಸ.) : ಆ್ಯಂಕರ್ : ಸಿರುಗುಪ್ಪ ನಗರಸಭೆ ಕಾರ್ಯಾಲಯದಿಂದ ಪ್ರಸ್ತಕ ಸಾಲಿಗೆ ನಗರಸಭೆಯ ನಿಧಿಯಡಿ ಶೇ.24.10 ರ (ಎಸ್‌ಸಿಎಸ್‌ಪಿ/ಟಿಎಸ್‌ಪಿ), ಶೇ.7.25 ಮತ್ತು ಶೇ.5 ರ ಅನುದಾನದಲ್ಲಿ ನಾನಾ ಸೌಲಭ್ಯಗಳನ್ನು ಅನುಷ್ಠಾನಗಳಿಸಲು ಉದ್ದೇಶಿಸಲಾಗಿದ್ದು, ಸಿರುಗುಪ್ಪ ವ್ಯಾಪ್ತಿಯ ಅರ್ಹರಿ
ಸಿರುಗುಪ್ಪ ನಗರಸಭೆ: ನಾನಾ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ


ಬಳ್ಳಾರಿ, 01 ನವೆಂಬರ್ (ಹಿ.ಸ.) :

ಆ್ಯಂಕರ್ : ಸಿರುಗುಪ್ಪ ನಗರಸಭೆ ಕಾರ್ಯಾಲಯದಿಂದ ಪ್ರಸ್ತಕ ಸಾಲಿಗೆ ನಗರಸಭೆಯ ನಿಧಿಯಡಿ ಶೇ.24.10 ರ (ಎಸ್‌ಸಿಎಸ್‌ಪಿ/ಟಿಎಸ್‌ಪಿ), ಶೇ.7.25 ಮತ್ತು ಶೇ.5 ರ ಅನುದಾನದಲ್ಲಿ ನಾನಾ ಸೌಲಭ್ಯಗಳನ್ನು ಅನುಷ್ಠಾನಗಳಿಸಲು ಉದ್ದೇಶಿಸಲಾಗಿದ್ದು, ಸಿರುಗುಪ್ಪ ವ್ಯಾಪ್ತಿಯ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಿರುಗುಪ್ಪ ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಡಿ.ಇಡಿ, ಸಿಪಿಇಡಿ, ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.

ಸಿರುಗುಪ್ಪ ನಗರದ ಹಿಂದುಳಿದ ವರ್ಗಗಳ ಜನಾಂಗದವರಿಗೆ ಶೇ.7.25 ರಡಿ ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ, ವಿಶೇಷ ಚೇತನರಿಗೆ ಶೇ.5 ರಡಿ ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುವುದು.

ಬೇಕಾದ ದಾಖಲೆ :

ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, 2 ಫೋಟೋ, ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆದಿಲ್ಲ ಎಂದು ದೃಢೀಕರಣ ಪ್ರತಿ, ವ್ಯಾಸಂಗ ಪ್ರಮಾಣ ಪತ್ರ, ಕಚ್ಛಾ ಪಕ್ಕಾ ಮನೆ ನಿರ್ಮಾಣಕ್ಕಾಗಿ ಅರ್ಜಿದಾರರ ಹೆಸರಿನಲ್ಲಿರುವ ಆಸ್ತಿಯ ದಾಖಲೆ ಮತ್ತು ಅಂಗವಿಕಲರಿದ್ದಲ್ಲಿ ಅಂಗವಿಕಲತೆಯ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಾರ್ಯಾಲಕ್ಕೆ ಸಂಪರ್ಕಿಸಬಹುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande