

ರಾಯಚೂರು, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡವು ಮೂರು ಸಾವಿರ ವರ್ಷ ಇತಿಹಾಸ ಹೊಂದಿದೆ. ಕನ್ನಡಕ್ಕಾಗಿ ಅನೇಕ ಹೋರಾಟಗಳು, ಚಳುವಳಿಗಳು, ಉಪವಾಸ ಸತ್ಯಾಗ್ರಹಗಳು ಆಗಿದ್ದು, ಹೀಗೆ ಕನ್ನಡಕ್ಕೆ ಬಹುದೊಡ್ಡ ಇತಿಹಾಸದ ಚರಿತ್ರೆ ಇದೆ. ನವೆಂಬರ್ 1, 1973 ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮುಕ್ತವಾಗಿ ಘೋಷಣೆ ಮಾಡುತ್ತಾರೆ. ಆಡಳಿತಾತ್ಮಕವಾಗಿ ಕನ್ನಡ ಭಾಷೆ ಪ್ರಧಾನವಾಗಬೇಕು ತದನಂತರ ಬಂದತಂಹ ಆಯೋಗಗಳು ಕನ್ನಡ ಸಾಹಿತ್ಯ ಸಮಿತಿ ಇತ್ಯಾದಿಗಳು ಕರ್ನಾಟಕ ರಾಜ್ಯದ ಭಾಷೆ, ಸಂಸ್ಕøತಿ, ನೀರು, ಗಡಿಭಾಗಗಳ ರಕ್ಷಣೆ, ಕನ್ನಡ ಭಾಷಾವಾರು ಹಿನ್ನಲೆಯಲ್ಲಿ ಇಂದು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ಇಲ್ಲಿಯ ಮುಖ್ಯವಾದ ಭಾಷೆಯಾಗಬೇಕು, ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಧ್ವಜಾರೋಹಣ ಮಾಡಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ವಿವಿಯ ಕುಲಸಚಿವರಾದ ಡಾ.ಚನ್ನಪ್ಪ.ಎ ಕೆ.ಎ.ಎಸ್. ಅವರು ಮಾತನಾಡಿ, ಕನ್ನಡ ಭಾಷೆಯು ಜೀವಂತಿಕೆಯ ಪ್ರತೀಕ, ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆಯಾಗಿ ಅಂಗೀಕರಿಸಿದೆ. ಕನ್ನಡ ಭಾಷೆ ಹೃದಯದಿಂದ ಬರುವಂತಹ ಭಾಷೆಯಾಗಿದೆ. ಧ್ವನಿಶಾಸ್ತ್ರದ ಮೂಲಕ ವೈಜ್ಞಾನಿಕವಾಗಿ ಅಧ್ಯಯನಮಾಡಿ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬಹುದು ಎಂದು ತಿಳಿಯಲಾಗಿದೆ. ಕನ್ನಡ ಭಾಷೆ ಸಮೃದ್ಧವಾಗಿದೆ ಭಾಷಾ ಪ್ರೀತಿ, ಕಾಳಜಿವಹಿಸಲು ನಾವೆಲ್ಲ ಕನ್ನಡಿಗರು ಮುಂದಾಗಬೇಕಾದ ಅವಶ್ಯಕತೆಯಿದೆ. ನಮ್ಮ ಗಡಿಭಾಗದಲ್ಲಿ ಸಾಕಷ್ಟು ಕನ್ನಡ ಶಾಲೆಗಳಿವೆ ಅವುಗಳ ದುಸ್ಥಿತಿಯನ್ನು ನಾವು ಕಾಣಬಹುದು ಗಡಿನಾಡಿನಲ್ಲಿರುವಂತಹ ನಮ್ಮ ವಿಶ್ವವಿದ್ಯಾನಿಲಯ ಗಡಿನಾಡು ಕನ್ನಡ ಶಾಲೆಗಳ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಾಲ್ಮೀಕಿ ವಿಶ್ವವಿದ್ಯಾಲಯದ ಹೆಸರನ್ನು ಮತ್ತಷ್ಟು ಮುನ್ನಡೆಗೆ ತರುವಂತಹ ಕೆಲಸ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಯ ಉಪಕುಲಸಚಿವರಾದ ಡಾ.ಕೆ.ವೆಂಕಟೇಶ್,. ಅವರು ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕವಾದ ಇತಿಹಾಸ ನೋಡಿದಾಗ, ಕನ್ನಡ ಚಳುವಳಿಕಾರರ ಅನೇಕ ಮಹನೀಯರ ಹೋರಾಟಗಳು ಚರಿತ್ರೆಯ ಪುಟಗಳಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಕನ್ನಡ ಭಾಷಿಕರನ್ನು ಮತ್ತೋಮ್ಮೆ ಭಾವನಾತ್ಮಕವಾಗಿ ಕಟ್ಟಿಕೊಡುವಂತಹ ಕೆಲಸವಾಗಬೇಕಿದೆ. ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು ಭವಿಷ್ಯ, ಕನ್ನಡವನ್ನು ಉಳಿಸಿಕೊಳ್ಳಲು ಪ್ರಮಾಣಿಕವಾದ ಪ್ರಯತ್ನ ಮಾಡೋಣ ಎಂದು ಅವರು ತಿಳಿಸಿದರು.
ವಿವಿಯ ಸಿಂಡಿಕೇಟ್ ಸದಸ್ಯರಾದ ಜೀಶಾನ್ ಆಖಿಲ್ ಸಿದ್ದಿಖಿ ಅವರು ಮಾತನಾಡಿ, ಹೋರಾಟಗಳು, ಚಳುವಳಿಗಳನ್ನು ನಾವು ನೋಡಿದಾಗ ಕನ್ನಡ ಭಾಷೆಯ ಪರಂಪರೆಯು ಅವರಲ್ಲಿ ಬೇರುರಿರುತ್ತವೆ. ಕನ್ನಡವು ಅನೇಕ ಜಾತಿ, ಧರ್ಮ, ಪಂಗಡಗಳನ್ನು ಮೀರಿ ಒಗ್ಗೂಡಿಸುವಂತಹ ಭಾಷೆಯಾಗಿದೆ. ಕನ್ನಡವನ್ನು ಉಳಿಸಿ-ಬೆಳೆಸುವ ಅವಶ್ಯಕತೆ ಎಲ್ಲರಲ್ಲಿಯೂ ಇರಬೇಕು. ಕನ್ನಡ ಕೇವಲ ಆಚರಣೆ, ಉತ್ಸವಗಳಿಗೆ ಸೀಮಿತ ಮಾಡದೆ, ಮುಂಬರುವ ಪೀಳಿಗೆಗೆ ಕನ್ನಡ ಕಲಿಸುವ ಮತ್ತು ಕನ್ನಡ ನಾಡು-ನುಡಿ ಸಂರಕ್ಷಣೆ ಮಾಡುವುದರ ಜೊತೆ ಬೆಳೆಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪೆÇ್ರ.ಜ್ಯೋತಿ ಧಮ್ಮ ಪ್ರಕಾಶ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಡಾ.ಸುಯಮೀಂದ್ರ ಕುಲಕರ್ಣಿ, ನಿಕಾಯಗಳ ಡೀನರುಗಳಾದ ಪ್ರೊ.ಪಾರ್ವತಿ.ಸಿ.ಎಸ್., ಪ್ರೊ.ಪಿ.ಭಾಸ್ಕರ್, ಡಾ.ಲತಾ.ಎಂ.ಎಸ್., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಸಿಂಡಿಕೇಟ್ ಸದಸ್ಯರಾದ ಹೆಚ್.ವಿ.ಶ್ರೇಯಾಂಕ್, ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರಾದ ಮಲ್ಲಿಕಾರ್ಜುನ.ಎನ್ ಸೇರಿದಂತೆ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಎನ್‍ಎಸ್‍ಎಸ್ ಘಟಕಾಧಿಕಾರಿಗಳು ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಡಾ.ಶರಣಪ್ಪ ಚಲುವಾದಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್