ತರಬೇತಿದಾರರಿಗೆ ಘಟಿಕೋತ್ಸವ ಕಾರ್ಯಕ್ರಮ
ವಿಜಯಪುರ, 01 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ನಾನಾ ವೃತ್ತಿಗಳಿಗೆ ಪ್ರವೇಶ ಪಡೆದ ತರಬೇತಿದಾರರಿಗೆ ಸ್ವಾಗತ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪೂರ್ಣಗೊಳಿಸಿ ತೇರ್ಗಡೆ ಹೊಂದಿರುವ ತರಬೇತಿದಾರರಿಗೆ ಘಟಿಕೋತ್ಸವ
ತರಬೇತಿ


ವಿಜಯಪುರ, 01 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ನಾನಾ ವೃತ್ತಿಗಳಿಗೆ ಪ್ರವೇಶ ಪಡೆದ ತರಬೇತಿದಾರರಿಗೆ ಸ್ವಾಗತ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪೂರ್ಣಗೊಳಿಸಿ ತೇರ್ಗಡೆ ಹೊಂದಿರುವ ತರಬೇತಿದಾರರಿಗೆ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಮತ್ತು ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿ. ಡಿ.‌ ಐಹೊಳಿ, ನನ್ನಿಂದ ಏನನ್ನೂ ಸಾದಿಸಲಾಗದು ಎಂಬ ಕೀಳರಿಮೆ ತೊರೆದು ನಾನೂ ಏನಬೇಕಾದರೂ ಸಾದಿಸಬಲ್ಲೆ ಎಂಬ ಭಾವನೆ ಬೆಳಸಿಕೊಳ್ಳಬೇಕು.‌ ಬಿ.‌ ಎಲ್. ಡಿ. ಇ ಸಂಸ್ಥೆಯನ್ನು ಕಟ್ಟಿ ಬೆಳಸಿದ ಪ್ರಾತಃಸ್ಮರಣೀಯರನ್ನು ಸ್ಮರಿಸಬೇಕು‌ ಎಂದು‌ ಹೇಳಿದರು.

ಇದೇ ವೇಳೆ ಕ್ಯಾಂಪಸ ಸಂದರ್ಶನದಲ್ಲಿ ಆಯ್ಕೆಯಾದ‌ ಮತ್ತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ತರಬೇತಿದಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ತರಬೇತಿ ಅಧಿಕಾರಿ ಎಸ್. ಜೆ. ಕರಿಗಾರ ಅವರು ಕಾಲೇಜು ನಡೆದು ಬಂದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಐಟಿಐ ಪ್ರಾಚಾರ್ಯ ಎಂ. ಡಿ. ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು.‌

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಿದ್ರಿ, ಶ್ರೀವಾಗೀಶ ಮರಿಮಠ, ಯಶವಂತ ಚವ್ಹಾಣ, ಸಂಗಮೇಶ ಗುಡ್ಡೊಡಗಿ, ಕಿರಣ ನಿಂಬಾಳ, ಸಿದ್ದು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಹುಮನಾಜ ಬಡಿಗೇರ ನಿರೂಪಿಸಿದರು‌. ದೀಪಿಕಾ ಸಾವಳಸಂಗ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande