
ನವದೆಹಲಿ, 01 ನವೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ನವದೆಹಲಿಯ ಉಡಾನ್ ಭವನದಲ್ಲಿ ಶಿಶುಪಾಲನಾ ಕೇಂದ್ರವನ್ನು ಉದ್ಘಾಟಿಸಿದರು.
ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಅದರ ಅಧೀನ ಕಚೇರಿಗಳ ನೌಕರರಿಗೆ ತಮ್ಮ ಚಿಕ್ಕ ಮಕ್ಕಳ ಆರೈಕೆಯ ಕಾರ್ಯನಿರ್ವಹಿಸಲು ಈ ಶಿಶುವಿಹಾರದಲ್ಲಿ ಸೌಲಭ್ಯ ಒದಗಿಸಲಾಗಿದೆ.
ಆರು ತಿಂಗಳಿನಿಂದ ಆರು ವರ್ಷದ ವಯಸ್ಸಿನ ಮಕ್ಕಳಿಗಾಗಿ ಈ ಕೇಂದ್ರದಲ್ಲಿ ನಿಯಮಿತ ಆರೈಕೆ, ಪೋಷಣೆಯುಳ್ಳ ಆಹಾರ, ಆಟದ ಅವಕಾಶ, ಆರಂಭಿಕ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಸುರಕ್ಷಿತ ಪರಿಸರದಲ್ಲಿ, ನೆಲ ಮಹಡಿಯಲ್ಲಿ ಸ್ಥಾಪಿಸಲಾದ ಈ ಶಿಶುವಿಹಾರವು ಸಿಸಿಟಿವಿ ಕ್ಯಾಮೆರಾಗಳು ಮತ್ತು ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ.
ಈ ಸೌಲಭ್ಯವನ್ನು ನಾಗರಿಕ ವಿಮಾನಯಾನ ಸಚಿವಾಲಯದ ನೌಕರರ ಜೊತೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ , ನಾಗರಿಕ ವಿಮಾನಯಾನ ನಿರ್ದೇಶನಾಲಯ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ವಿಮಾನ ಅಪಘಾತ ತನಿಖಾ ಬ್ಯೂರೋ, ಹಾಗೂ ವಾಯುಯಾನ ಆರ್ಥಿಕ ನಿಯಂತ್ರಣ ಪ್ರಾಧಿಕಾರ ನೌಕರರು ಉಪಯೋಗಿಸಬಹುದು.
ಸಚಿವಾಲಯದ ಪ್ರಕಾರ, ಈ ಶಿಶುವಿಹಾರ ಯೋಜನೆ ‘ವಿಶೇಷ ಅಭಿಯಾನ 5.0’ ಅಡಿಯಲ್ಲಿ ಪ್ರಾರಂಭಗೊಂಡಿದೆ. ಈ ಪ್ರಯತ್ನದಿಂದ ಮಹಿಳಾ ಹಾಗೂ ಪುರುಷ ನೌಕರರು ತಮ್ಮ ಕೆಲಸದ ವೇಳೆ ಮಕ್ಕಳ ಆರೈಕೆಯ ಬಗ್ಗೆ ಚಿಂತಿಸದಿರಲು ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa