ಸಮೃದ್ಧ ಕನ್ನಡ ನಾಡು ನಿರ್ಮಾಣ ನಮ್ಮ ಗುರಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಉಡುಪಿ, 01 ನವೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ರಾಜ್ಯೋತ್ಸವದ 70ನೇ ಸಂಭ್ರಮದ ಅಂಗವಾಗಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, “ಸಮರಸತೆ ಮತ್ತು ಪ್ರಗತಿಯುತ ಕನ್ನಡ ನಾಡು ನಿರ್ಮಾಣ ನಮ್ಮೆಲ್ಲರ ಸಂಯುಕ್ತ ಗುರಿಯಾಗಬ
Hebalkar


ಉಡುಪಿ, 01 ನವೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ರಾಜ್ಯೋತ್ಸವದ 70ನೇ ಸಂಭ್ರಮದ ಅಂಗವಾಗಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, “ಸಮರಸತೆ ಮತ್ತು ಪ್ರಗತಿಯುತ ಕನ್ನಡ ನಾಡು ನಿರ್ಮಾಣ ನಮ್ಮೆಲ್ಲರ ಸಂಯುಕ್ತ ಗುರಿಯಾಗಬೇಕು” ಎಂದು ಹೇಳಿದರು.

ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ, ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದರು. “1956ರ ನವೆಂಬರ್ 1ರಂದು ಮೈಸೂರು ರಾಜ್ಯ ರೂಪುಗೊಂಡು, 1973ರಲ್ಲಿ ದೇವರಾಜ ಅರಸರು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ಕ್ಷಣದಿಂದ ಕನ್ನಡ ನಾಡು ಒಗ್ಗಟ್ಟಾಯಿತು,” ಎಂದರು.

ಹೆಬ್ಬಾಳಕರ್ ಅವರು ರಾಜ್ಯದ ಸಾಂಸ್ಕೃತಿಕ ಹಿರಿಮೆ, ಯಕ್ಷಗಾನ, ಭೂತಕೋಲ ಮುಂತಾದ ಜನಪದ ಕಲೆಯ ಮಹತ್ವವನ್ನು ಉಲ್ಲೇಖಿಸಿದರು. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ಶೇ.95ರಷ್ಟು ಬಡ ಮಹಿಳೆಯರ ಜೀವನಮಟ್ಟ ಸುಧಾರಿಸಿವೆ ಎಂದು ವಿವರಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಪದಕ ವಿಜೇತರಿಗೆ ನಗದು ಪುರಸ್ಕಾರವನ್ನು ಹೆಚ್ಚಿಸಿರುವುದರ ಜೊತೆಗೆ ಯುವನಿಧಿ ಯೋಜನೆಯಿಂದ ಯುವಕರಿಗೆ ಆರ್ಥಿಕ ಬಲ ನೀಡಲಾಗುತ್ತಿದೆ, ಅಕ್ಕಪಡೆ ಯೋಜನೆ, ಮಿಷನ್ ವಾತ್ಸಲ್ಯ, ಗೃಹ ಆರೋಗ್ಯ ಯೋಜನೆ, ಹಾಗೂ ವಿಕಲಚೇತನರ ಆರೈಕೆದಾರರ ಭತ್ಯೆ ಯೋಜನೆ ಮುಂತಾದ ಜನಪರ ಕ್ರಮಗಳ ಕುರಿತು ಮಾಹಿತಿ ನೀಡಿದರು. ಪ್ರವಾಸೋದ್ಯಮ ನೀತಿಯಲ್ಲಿ ಹೊಸ ಹೂಡಿಕೆ ಮತ್ತು 1.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

ಮೀನುಗಾರರು, ರೈತರು, ಕಾರ್ಮಿಕರು ಮತ್ತು ಮಹಿಳೆಯರ ಬದುಕು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande