ರಾಯಚೂರು, 09 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಪ್ರತಿ ವರ್ಷ ಅಕ್ಟೋಬರ್ 10 ರಂದು ಜಗತ್ತಿನಾದ್ಯಂತ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ 2025 ನೇ ಸಾಲಿನ ಆಚರಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ವಿಷಯವೇನೆಂದರೆ “ಮಾನವೀಯ ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ”.
ಮಾನಸಿಕ ಆರೋಗ್ಯ ಎಂದರೆ ಕೇವಲ ಮಾನಸಿಕ ಅಸ್ವಸ್ಥತೆ ಇಲ್ಲದಿರುವುದಷ್ಟೇ ಅಲ್ಲ, ಅದು ವ್ಯಕ್ತಿಯ ಸಂಪೂರ್ಣ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಕ್ಷೇಮದ ಪ್ರತಿಬಿಂಬ. ಒತ್ತಡ, ಸಂಕಷ್ಟ, ನಷ್ಟ, ಮತ್ತು ನೋವುಗಳ ನಡುವೆಯೂ ಬದಕನ್ನು ಸಮತೋಲನಗೊಳಿಸುವ ಸಾವiಥ್ರ್ಯವನ್ನೇ ಮಾನಸಿಕ ಆರೋಗ್ಯವೆಂದು ಹೇಳಬಹುದು. ನಾವು ಪ್ರತಿ ದಿನ ಶಾರೀರಿಕ ಆರೋಗ್ಯಕ್ಕಾಗಿ ಸಮಯ, ಹಣ, ಮತ್ತು ಶ್ರಮ ಹೂಡುತ್ತೇವೆ. ಆದರೆ ಅದೇಮಟ್ಟದಲ್ಲಿ ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತೇವೆ. ವಾಸ್ತವವಾಗಿ ಮನಸ್ಸು ಆರೋಗ್ಯವಾಗಿದ್ದರೆ ದೇಹವೂ ಆರೋಗ್ಯವಾಗಿರಲು ಸುಲಭ. ಇನ್ನು ತುರ್ತು ಪರಿಸ್ಥಿತಿ ಸಂಧರ್ಭದಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ ಅವಲೋಕಿಸುವದಾದರೆ ಇಂದಿನ ಜಗತ್ತು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ.
ಉದಾಹರಣೆಗೆ ನೈಸರ್ಗಿಕ ವಿಪತ್ತುಗಳು: ಭೂಕಂಪ, ಪ್ರವಾಹ, ಬರಹ ಚಂಡಮಾರುತ ಇತ್ಯಾದಿ. ಮಾನವೀಯ ಸಂಕಷ್ಟಗಳು: ಯುದ್ದ, ಸಂಘರ್ಷ, ಸ್ಥಳಾಂತರ ಇತ್ಯಾದಿ. ಸಾರ್ವಜನಿಕ ಆರೋಗ್ಯ ತುರ್ತುಗಳು: ಕೋವೀಡ್-19 ಸಾಂಕ್ರ್ರಾಮಿಕ ರೋಗದಂತಹ ಸನ್ನಿವೇಶಗಳು. ಇಂತಹ ಮೇಲಿನ ಸಂದರ್ಭಗಳಲ್ಲಿ ಸಾರ್ವಜನಿಕರು ಮನೆಯನ್ನು, ಕುಟುಂಬವನ್ನು, ಜೀವನೋಪಾಯವನ್ನು ಅಲ್ಲದೇ ಭವಿಷ್ಯದ ಭರವಸೆಯನ್ನು ಕಳೆದುಕೊಳ್ಳುವುದರಿಂದ, ಅನೇಕರು ಮಾನಸಿಕ ಆಘಾತ, ನಿರಾಶೆ, ಆತಂಕ, ನಿದ್ರಾಹೀನತೆ, ದುಖ: ಕೋಪಗಳನ್ನು ಅನುಭವಿಸುತ್ತಾರೆ. ಕೆಲವರು ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಗೆ ತಿರುಗುತ್ತಾರೆ. ಅಲ್ಲದೇ ಆತ್ಮಹತ್ಯೆಯ ಅಪಾಯವೂ ಹೆಚ್ಚಾಗುತ್ತದೆ.
ಇಂತಹ ಸಂದರ್ಭಗಳಲ್ಲ್ಲಿ ದೈಹಿಕ ಆರೋಗ್ಯ ಸೇವೆಗಳಷ್ಟೇ ಅಲ್ಲ. ಮಾನಸಿಕ ಆರೋಗ್ಯ ಸೇವೆಗಳು ಅತ್ಯಂತ ಮುಖ್ಯ.ಆದರೆ ದುರದುಷ್ಟಾವಶಾತ್, ಸಮಾಜದಲ್ಲಿ ಇನ್ನೂ ಮಾನಸಿಕ ಅಸ್ವಸ್ಥತೆಗೆ ಸಂಭಂದಿಸಿದ ಕಳಂಕವಿದೆ.“ಮಾನಸಿಕ ಅಸ್ವಸ್ಥ” ಎಂದು ಒಬ್ಬನಿಗೆ ಮುದ್ರೆ ಅಂಟಿಸಿದರೆ, ಆತನು ನೆರವು ಕೇಳಲು ಹೆದರುತ್ತಾನೆ. ವಿಶ್ವ ಮಾನಸಿಕ ಆರೋಗ್ಯ ದಿನದ ಆಚರಣೆಯ ಉದ್ದೇಶವೇ ಈ ಕಳಂಕವನ್ನು ಕಡಿಮೆಮಾಡಿ, ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು.
ಸರ್ಕಾರ ಮತ್ತು ಸಮಾಜದ ಪಾತ್ರ: ಸರ್ಕಾರವು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಾಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿಯೇ ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ತುರ್ತು ಪರಿಸ್ಥಿತಿಗಳಿಗೆ ತಕ್ಕಂತೆ ತುರ್ತು ಮಾನಸಿಕ ಆರೈಕೆ ಯೋಜನೆ ರೂಪಿಸುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಜೀವನ ಕೌಶಲ್ಯ ಶಿಕ್ಷಣ, ಒತ್ತಡ ನಿರ್ವಹಣಾ ತರಬೇತಿಯನ್ನು ನೀಡಲಾಗುತ್ತಿದೆ.ಅದರಂತೆ ಪತ್ರಿಕಾ ವಿದ್ಯುನ್ಮಾನ ಮಾದ್ಯಮಗಳು ಸಹ ಸರಿಯಾದ ಮಾಹಿತಿಯನ್ನು ಹಂಚಿಕೊಂಡು ಜನರಲ್ಲಿ ಅರಿವು ಮತ್ತು ಸ್ವೀಕಾರವನ್ನು ಬೆಳೆಸಬೇಕು.
ವೈಯಕ್ತಿಕವಾಗಿ ನಮ್ಮ-ನಿಮ್ಮೆಲ್ಲರ ಹೊಣೆಗಾರಿಕೆ: ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾನುಭೂತಿ ಮತ್ತು ಬೆಂಬಲ ನೀಡಬೇಕು. ತೊಂದರೆ ಅನುಭವಿಸುತ್ತಿರುವವರು ಸಹಾಯ ಕೇಳಲು ಹೆದರಬಾರದು. ಕುಟುಂಬ,ಸ್ನೇಹಿತರು ಪರಸ್ಪರ ಮನೋಭಾವ ಆಧಾರವಾಗಿ ನಿಲ್ಲಬೇಕು. ಸ್ವಯಂ ಸೇವಾ ಸಂಘಟನೆಗಳು ಸಮುದಾಯ ಮಟ್ಟದಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರತಿಯೊಬ್ಬರು ತಮ್ಮ ಮಾನಸಿಕ ಆರೋಗ್ಯದ ಆರೈಕೆ ಬಗ್ಗೆ ಗಮನಕೊಡುವುದು ಅತೀ ಮುಖ್ಯ. ‘ಮಾನವೀಯ ತುರ್ತು ಪರಿಸ್ಥಿತಿಗಳಲ್ಲಿಯೂ ಸಹಾನುಭೂತಿ, ಬೆಂಬಲ ಮತ್ತು ಮಾನಸಿಕ ಆರೋಗ್ಯ ಅಗತ್ಯ. ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮಾನವೀಯ ಕರ್ತವ್ಯವಾಗಿದೆ.
ಲೇಖಕರು:
ಡಾ. ನಂದಿತಾ ಎಮ್.ಎನ್. ಡಾ.ಮನೋಹರ ವೈ. ಪತ್ತಾರ
.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್