ಜಾಲಿವುಡ್ ಸ್ಟುಡಿಯೋ ಬೀಗ ತೆರವು, ಬಿಗ್ ಬಾಸ್ ಕನ್ನಡ ಶೋ ಪುನರಾರಂಭಕ್ಕೆ ದಾರಿ
ರಾಮನಗರ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ನಿಂದ ಸ್ಥಗಿತಗೊಂಡಿದ್ದ ಜನಪ್ರಿಯ ಕನ್ನಡ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ೧೨ನೇ ಆವೃತ್ತಿಗೆ ನಿರಾಳತೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋ ಮುಟ್ಟುಗೋಲು ತೆರವುಗೊಂಡಿದ್
Jollywood


ರಾಮನಗರ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್‌ನಿಂದ ಸ್ಥಗಿತಗೊಂಡಿದ್ದ ಜನಪ್ರಿಯ ಕನ್ನಡ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ೧೨ನೇ ಆವೃತ್ತಿಗೆ ನಿರಾಳತೆ ಸಿಕ್ಕಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋ ಮುಟ್ಟುಗೋಲು ತೆರವುಗೊಂಡಿದ್ದು, ಸ್ಪರ್ಧಿಗಳು ಇಂದು ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಾಲಿಟ್ಟಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶಂತ್ ಗುರುಕರ್ ಅವರು ಜಾಲಿವುಡ್‌ನ ಗೇಟ್ ‘ಸಿ’ ತೆರೆದು ಶೋ ಪುನರಾರಂಭಕ್ಕೆ ಅನುಮತಿ ನೀಡಿದ್ದಾರೆ. ಅಗತ್ಯ ಸೇವಾ ಪರವಾನಗಿ ನೀಡಲಾಗಿದ್ದು, ಶೋ ತಂಡ ಹಾಗೂ ಸ್ಪರ್ಧಿಗಳನ್ನು ಮನೆಗೆ ಕರೆತರಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಯಶಂತ್ ಗುರುಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಜಾಲಿವುಡ್ ಗೇಟ್ ಸಿ ತೆರೆಯಲಾಗಿದೆ. ಬಿಗ್ ಬಾಸ್ ಶೋಗೆ ಯಾವುದೇ ರೀತಿಯ ಆಕ್ಷೇಪವಿಲ್ಲ. ಆದರೆ ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 28ರಂದು ನಟ ಸುದೀಪ್ ಅವರ ನಿರೂಪಣೆಯಲ್ಲಿ ಆರಂಭಗೊಂಡ ೧೨ನೇ ಆವೃತ್ತಿ ವಾರದೊಳಗೆ ಸ್ಥಗಿತಗೊಂಡಿತ್ತು. ಅಕ್ಟೋಬರ್ 7ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತ್ಯಾಜ್ಯ ನೀರು ಬಿಡುಗಡೆ, ಸ್ಯೂ ಟ್ರೀಟ್‌ಮೆಂಟ್ ಪ್ಲಾಂಟ್ ಕಾರ್ಯನಿರ್ವಹಣೆಯ ಕೊರತೆ, ಡೀಸಲ್ ಜನರೇಟರ್‌ಗಳ ಅನಧಿಕೃತ ಬಳಕೆ ಮುಂತಾದ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಸ್ಟುಡಿಯೋ ಸೀಲ್ ಮಾಡಿತ್ತು.

ಸ್ಪರ್ಧಿಗಳನ್ನು ಆ ಬಳಿಕ ಈಗಲ್‌ಟನ್ ರಿಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಈ ಕ್ರಮಕ್ಕೆ ರಾಜಕೀಯ ಬಣ್ಣ ಹಚ್ಚಲ್ಪಟ್ಟಿದ್ದರೂ, ಕಿಚ್ಚ ಸುದೀಪ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮಾತುಕತೆಯ ನಂತರ ಸಮಸ್ಯೆ ಬಗೆಹರಿದಿದೆ.

ಜಿಲ್ಲಾಧಿಕಾರಿಯವರು ಜಾಲಿವುಡ್ ಸ್ಟುಡಿಯೋಗೆ ತಾತ್ಕಾಲಿಕವಾಗಿ 10 ದಿನಗಳ ಅನುಮತಿ ನೀಡಿದ್ದು, ಈ ಅವಧಿಯಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ನಿಯಮಗಳ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಪರಿಸರ ನಿಯಮಗಳನ್ನು ಪಾಲಿಸುತ್ತಾ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ, ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande