ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಹಿಮಪಾತ
ಡೆಹ್ರಾಡೂನ್, 08 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದಲ್ಲಿ ಮಳೆ-ಹಿಮಪಾತ ಮುಂದುವರೆದಿದ್ದು, ಎತ್ತರದ ಪರ್ವತ ಪ್ರದೇಶಗಳು ಬೆಳ್ಳಿಬೆಳಕಿನಲ್ಲಿ ಮಡುವಂತೆ ಕಾಣಿಸುತ್ತಿವೆ. ವಿಶ್ವ ಪ್ರಸಿದ್ಧ ಚಾರುಧಾಮಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳೊಂದಿಗೆ ಹೇಮಕುಂಡ್ ಸಾಹಿಬ
Snow fall


ಡೆಹ್ರಾಡೂನ್, 08 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದಲ್ಲಿ ಮಳೆ-ಹಿಮಪಾತ ಮುಂದುವರೆದಿದ್ದು, ಎತ್ತರದ ಪರ್ವತ ಪ್ರದೇಶಗಳು ಬೆಳ್ಳಿಬೆಳಕಿನಲ್ಲಿ ಮಡುವಂತೆ ಕಾಣಿಸುತ್ತಿವೆ. ವಿಶ್ವ ಪ್ರಸಿದ್ಧ ಚಾರುಧಾಮಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ದೇವಾಲಯಗಳೊಂದಿಗೆ ಹೇಮಕುಂಡ್ ಸಾಹಿಬ್ ಸಹ ಹಿಮಪಾತದಿಂದ ಆವೃತವಾಗಿದೆ.

ಹೇಮಕುಂಡ್ ಸಾಹಿಬ್ ಮಾರ್ಗದಲ್ಲಿ ಸುಮಾರು ಎರಡು ಅಡಿ ಹಿಮಪಾತ ದಾಖಲಾಗಿದ್ದು, ಯಾತ್ರಿಕರಿಗೆ ಚಾರಣ ಕಷ್ಟಕರವಾಗಿದೆ. ಕೊರೆಯುವ ಚಳಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಯಾತ್ರಿಕರನ್ನು ಸುರಕ್ಷಿತವಾಗಿ ದೇಗುಲ ತಲುಪಿಸಲು ಸಹಾಯ ಮಾಡುತ್ತಿದ್ದಾರೆ.

ಡೆಹ್ರಾಡೂನ್ ಹವಾಮಾನ ಕೇಂದ್ರದ ಪ್ರಕಾರ, 3500 ಮೀಟರ್‌ಗಿಂತ ಮೇಲಿನ ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಮುಂದುವರಿಯುವ ಸಾಧ್ಯತೆ ಇದೆ. ಪಿಥೋರಗಢ, ಬಾಗೇಶ್ವರ, ಉತ್ತರಕಾಶಿ, ರುದ್ರಪ್ರಯಾಗ ಮತ್ತು ಚಮೋಲಿ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.

ಹಿಮಪಾತದಿಂದಾಗಿ ದೇವಾಲಯ ಪ್ರದೇಶಗಳಲ್ಲಿ ತೀವ್ರ ಚಳಿ ವಾತಾವರಣ ನಿರ್ಮಾಣವಾಗಿದೆ. ಯಾತ್ರಿಕರಿಗೆ ಆಹಾರ, ವೈದ್ಯಕೀಯ ಹಾಗೂ ಆಶ್ರಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಬದರಿನಾಥ ಮತ್ತು ಕೇದಾರನಾಥ ದೇವಾಲಯ ಸಮಿತಿಗಳ ಅಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಸಿಖ್ಖರ ಪವಿತ್ರ ಸ್ಥಳ ಹೇಮಕುಂಡ್ ಸಾಹಿಬ್‌ನ ಸಂಪೂರ್ಣ ಮಾರ್ಗವು ಹಿಮದಿಂದ ಆವೃತವಾಗಿದ್ದು, ಯಾತ್ರಾರ್ಥಿಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande