ಮಾಸ್ಕೋ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೂರು ದಿನಗಳ ತಜಿಕಿಸ್ತಾನ್ ಭೇಟಿಗಾಗಿ ದುಶಾಂಬೆ ನಗರಕ್ಕೆ ತೆರಳುತ್ತಿದ್ದಾರೆ. ಅಕ್ಟೋಬರ್ 8ರಿಂದ 10ರವರೆಗೆ ನಡೆಯುವ ಈ ಭೇಟಿಯ ವೇಳೆ ಅವರು ತಜಿಕಿಸ್ತಾನ್ ಅಧ್ಯಕ್ಷ ಎಮೋಮಾಲಿ ರಹಮಾನ್ ಅವರನ್ನು ಭೇಟಿ ಮಾಡಲಿದ್ದಾರೆ.
ಅಕ್ಟೋಬರ್ 9ರಂದು ಪುಟಿನ್ ಎರಡನೇ ರಷ್ಯಾ–ಮಧ್ಯ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಮಧ್ಯ ಏಷ್ಯಾ ರಾಷ್ಟ್ರಗಳ ಜೊತೆ ಆರ್ಥಿಕ, ಭದ್ರತಾ ಮತ್ತು ಪ್ರಾದೇಶಿಕ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ. ಭೇಟಿ ಕೊನೆಯ ದಿನವಾದ ಅಕ್ಟೋಬರ್ 10ರಂದು ಅವರು ಸಿಐಎಸ್ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ವ್ಯಾಪಾರ, ಹೂಡಿಕೆ ಮತ್ತು ರಾಜಕೀಯ ಸಹಕಾರ ಬಲಪಡಿಸುವ ಕುರಿತಾದ 20ಕ್ಕೂ ಹೆಚ್ಚು ದಾಖಲೆಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.
ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ TASS ಪ್ರಕಾರ, ಪುಟಿನ್ ಅವರ ನಿಯೋಗದಲ್ಲಿ ಉಪ ಪ್ರಧಾನ ಮಂತ್ರಿಗಳಾದ ಅಲೆಕ್ಸಿ ಓವರ್‌ಚುಕ್ ಹಾಗೂ ಮರಾತ್ ಖುಸ್ನುಲ್ಲಿನ್ ಸೇರಿದಂತೆ ಪ್ರಮುಖ ಸಚಿವರು ಮತ್ತು ರಕ್ಷಣಾ, ಆರ್ಥಿಕ, ಕೈಗಾರಿಕಾ, ಶಿಕ್ಷಣ, ಆರೋಗ್ಯ, ಸಾರಿಗೆ ವಿಭಾಗಗಳ ಉನ್ನತ ಅಧಿಕಾರಿಗಳು ಸೇರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa