ಚಂಡೀಗಡ, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಂಜಾಬಿ ಸಂಗೀತ ಲೋಕದ ಖ್ಯಾತ ಗಾಯಕ ರಾಜವೀರ್ ಜವಾಂಡಾ ಅವರು ನಿಧನರಾಗಿದ್ದಾರೆ. ಕಳೆದ ಸೆಪ್ಟೆಂಬರ್ 27ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಕ ಗಂಭೀರವಾಗಿ ಗಾಯಗೊಂಡಿದ್ದರು.
ತಲೆ ಮತ್ತು ಬೆನ್ನುಮೂಳೆ ಮೇಲೆ ತೀವ್ರ ಗಾಯಗಳಿಂದಾಗಿ ಅವರನ್ನು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 11 ದಿನಗಳ ಕಾಲ ಅವರು ಜೀವನ್ಮರಣ ಹೋರಾಟ ನಡೆಸಿದರು. ಚಿಕಿತ್ಸೆ ವೇಳೆ ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ, ವೈದ್ಯರ ಪ್ರಯತ್ನಗಳ ನಡುವೆಯೇ ಅವರು ಅಕ್ಟೋಬರ್ 8ರಂದು ಕೊನೆಯುಸಿರೆಳೆದರು.
ಖ್ಯಾತ ಪಂಜಾಬಿ ನಟಿ ನೀರು ಬಜ್ವಾ ಅವರು ಸಾಮಾಜಿಕ ಮಾಧ್ಯಮದ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಅವರು “ಸಂಗೀತ ಕ್ಷೇತ್ರವು ನಿಜವಾದ ಪ್ರತಿಭೆಯನ್ನು ಕಳೆದುಕೊಂಡಿದೆ” ಎಂದು ಬರೆದಿದ್ದಾರೆ. ಅನೇಕ ಪಂಜಾಬಿ ಕಲಾವಿದರು ಸಹ ರಾಜವೀರ್ ಅವರಿಗೆ ಗೌರವ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa