ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಧ್ವನಿಯನ್ನು ಹತ್ತಿಕ್ಕಲಾಯಿತು:ಯುಪಿ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್
ಲಕ್ನೋ, 8 ಅಕ್ಟೋಬರ್ (ಹಿ.ಸ.): ಆ್ಯಂಕರ್: ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯು ಅತ್ಯಂತ ಕರಾಳ ಅಧ್ಯಾಯವಾಗಿದ್ದು, ನಾಗರಿಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದ
Hs


Hs


HS


ಲಕ್ನೋ, 8 ಅಕ್ಟೋಬರ್ (ಹಿ.ಸ.):

ಆ್ಯಂಕರ್:

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯು ಅತ್ಯಂತ ಕರಾಳ ಅಧ್ಯಾಯವಾಗಿದ್ದು, ನಾಗರಿಕ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಯಿತು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಹೇಳಿದರು. ಆ ಅವಧಿಯಲ್ಲಿ ಪತ್ರಿಕಾ ಮಾಧ್ಯಮದ ಧ್ವನಿಯನ್ನು ನಿಗ್ರಹಿಸಲಾಗಿದ್ದು, ಚಿತ್ರಹಿಂಸೆ ಉಚ್ಚ ಮಟ್ಟ ತಲುಪಿತ್ತು, ಜನರಿಗೆ ವಾಕ್ ಮತ್ತು ಚಲನೆಯ ಸ್ವಾತಂತ್ರ್ಯವೇ ಇರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಲಕ್ನೋ ವಿಶ್ವವಿದ್ಯಾಲಯದ ಮಾಳವೀಯ ಸಭಾಂಗಣದಲ್ಲಿ ತುರ್ತು ಪರಿಸ್ಥಿತಿಯ 50 ವರ್ಷ ಎಂಬ ವಿಷಯದಡಿ ಬಹುಭಾಷಾ ಸುದ್ದಿ ಸಂಸ್ಥೆ ಹಿಂದೂಸ್ತಾನ್ ಸಮಾಚಾರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಗಿನ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವವನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು, ರಾಷ್ಟ್ರಪತಿಯನ್ನು ಸಹಿ ಹಾಕುವಂತೆ ಒತ್ತಾಯಿಸಿತು. ಇಂದು ಸಂವಿಧಾನದ ಪ್ರತಿಯನ್ನು ಹೊತ್ತೊಯ್ಯುವವರೇ ಅಂದಿನ ಸಂವಿಧಾನದ ಕೊಲೆಗೆ ಕಾರಣರಾದವರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ವೇಗವಾಗಿ ಸಾಗುತ್ತಿದೆ. ಬಿಜೆಪಿ ಮತಾಧಾರಿತ ಪಕ್ಷವಲ್ಲ ‘ಮೊದಲು ರಾಷ್ಟ್ರ’ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಪಾಠಕ್ ಹೇಳಿದರು.

ಇನ್ನೂ ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರು ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಹೋರಾಟಗಾರರ ಧೈರ್ಯದಿಂದ ಸಂವಿಧಾನದ ಗೌರವ ಮತ್ತು ಸ್ವಾತಂತ್ರ್ಯ ಉಳಿಯಿತು ಎಂದು ಹೇಳಿದರು. ಆ ಅವಧಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಳಿಸಲಾಗದ ಕಲೆ ಎಂದರು.

ಮಾಜಿ ಸಚಿವ ಸುರೇಶ್ ರಾಣಾ ಅವರು ಆಗಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿಯನ್ನು ಹೇರಿದರು ಎಂದು ಆರೋಪಿಸಿದರು. “ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದ ಯುವಜನರ ದೇಶವನ್ನು ಅಧಿಕಾರದ ದುರಾಸೆ ಪುಡಿಪುಡಿ ಮಾಡಿತು,” ಎಂದು ಅವರು ವಿಷಾದಿಸಿದರು. ಯುವ ಪೀಳಿಗೆಯು ಆ ಹೋರಾಟದ ಇತಿಹಾಸವನ್ನು ಅರಿತು ಮುಂದಿನ ತಲೆಮಾರಿಗೆ ತಲುಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ 11 ಮಂದಿ ಪ್ರಜಾಪ್ರಭುತ್ವ ಹೋರಾಟಗಾರರನ್ನು ವಸ್ತ್ರ, ಶಂಖ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಸನ್ಮಾನಿತರು: ಭರತ್ ದೀಕ್ಷಿತ್, ರಾಜೇಂದ್ರ ತಿವಾರಿ, ಮಣಿರಾಮ್ ಪಾಲ್, ಭಾನು ಪ್ರತಾಪ್, ಗಂಗಾ ಪ್ರಸಾದ್, ರಮಾಶಂಕರ್ ತ್ರಿಪಾಠಿ, ದಿನೇಶ್ ಪ್ರತಾಪ್ ಸಿಂಗ್, ದಿನೇಶ್ ಅಗ್ನಿಹೋತ್ರಿ, ಅಜಿತ್ ಸಿಂಗ್, ವಿಶ್ರಾಮ್ ಸಾಗರ್ ಮತ್ತು ಸುರೇಶ್ ರಾಜ್ವಾನಿ.

ಈ ಸಂದರ್ಭದಲ್ಲಿ ಯುಗ್ವರ್ತ ಮತ್ತು ನವೋತ್ಥಾನ ನಿಯತಕಾಲಿಕೆಗಳ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮವನ್ನು ಪ್ರೊ. ಅಮಿತ್ ಕುಶ್ವಾಹ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಹಿಂದೂಸ್ತಾನ್ ಸಮಾಚಾರ್ ಸುದ್ದಿ ಸಂಸ್ಥೆ ಅಧ್ಯಕ್ಷರಾದ ಅರವಿಂದ್ ಮರ್ಡಿಕರ್, ರಾಜೇಂದ್ರ ಸಕ್ಸೇನಾ, ಸ್ವಾಮಿ ಮುರಾರಿ ದಾಸ್, ಪ್ರಶಾಂತ್ ಭಾಟಿಯಾ, ಹರೀಶ್ ಶ್ರೀವಾಸ್ತವ, ಅವನೀಶ್ ತ್ಯಾಗಿ, ಮನೀಶ್ ಶುಕ್ಲಾ, ಆನಂದ್ ದುಬೆ, ಡಾ. ಹರ್ನಾಮ್ ಸಿಂಗ್ ಹಾಗೂ ಅನಿಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande