ವಿಜಯಪುರ, 8 ಅಕ್ಟೋಬರ್ (ಹಿ.ಸ.)
ಆ್ಯಂಕರ್: ವಿಜಯಪುರ ತಾಲೂಕಿನ ಹಡಗಲಿ ಗ್ರಾಮದಲ್ಲಿ ಪ್ರಸ್ತಾವಿತ 1*10 ಎಂವ್ಹಿಎ, 110/11ಕೆವ್ಹಿ ವಿದ್ಯುತ್ ಉಪ ಕೇಂದ್ರ ಮತ್ತು 110 ಕೆವಿ ದ್ವಿ-ಮಾರ್ಗ ಗೋಪುರದ ಮೇಲೆ ಒಂಟಿ ವಿದ್ಯುತ್ ಮಾರ್ಗವನ್ನು ಹಾಲಿ ಇರುವ 110 ಕೆವ್ಹಿ ಉಕ್ಕಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಒಂದು ಟರ್ಮಿನಲ್ ಬೇ ನಿರ್ಮಿಸುವ ಮೂಲಕ 15.589 ಕಿ.ಮೀ. ವಿದ್ಯುತ್ ಮಾರ್ಗವನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಅ.9ರಂದು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಶಿವಣಗಿ ಐಪಿ, ಬಹು ಗ್ರಾಮ ನೀರು ಸರಬರಾಜು, ಯಂಭತ್ನಾಳ ಐಪಿ, ಹಡಗಲಿ ಐಪಿ, ರಾಮತೀರ್ಥ ಐಪಿ ಹಾಗೂ ಶಿವಣಗಿ ಎನ್.ಜೆ.ವಾಯ್. ಫೀಡರ್‍ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande