ಆರ್.ಎಲ್ ಕಂಪನಿ ವಿರುದ್ದ ಕ್ರಮಕ್ಕೆ ಕೋಳಿ ಸಾಕಾಣಿಕೆದಾರರಿಂದ ಡಿಸಿಗೆ ದೂರು
ಆರ್.ಎಲ್ ಕಂಪನಿ ವಿರುದ್ದ ಕ್ರಮಕ್ಕೆ ಕೋಳಿ ಸಾಕಾಣಿಕೆದಾರರಿಂದ ಡಿಸಿಗೆ ದೂರು
ಚಿತ್ರ ; ಕೋಳಿ ಸಾಕಾಣಿಕೆದಾರರ ಸಹಕಾರ ಸಂಘದಿಂದ ಕೋಲಾರ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ದೂರು ಸಲ್ಲಿಸಿದರು.


ಕೋಲಾರ,೮ ಅಕ್ಟೋಬರ್ (ಹಿ.ಸ.)

ಆಂಕರ್ : ಕೋಳಿ ಸಾಕಾಣಿಕೆದಾರರಿಗೆ ಆರ್.ಎಲ್ ಕಂಪನಿಯ ಮುಖ್ಯಸ್ಥ ಮೋಹನ್ ಕೃಷ್ಣ ಹಾಗೂ ಡಿಜಿಎಂ ಕರುಣಕರನ್ ಸೇರಿದಂತೆ ಇತರರು ಸೇರಿಕೊಂಡು ಜಿಸಿ ಹಣ ಕೊಡದೆ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ದೂರು ಸಲ್ಲಿಸಿದರು.

ಸಂಘದ ಅಧ್ಯಕ್ಷ ರಾಜಕುಮಾರ್ ಮಾತನಾಡಿ ಕೋಳಿ ಸಾಕಾಣಿಕೆದಾರರಿಗೆ ಆರ್.ಎಲ್ ಕಂಪನಿಯಿಂದ ಒಂದುವರೆ ವರ್ಷದಿಂದ ಸುಮಾರು ೧೫ ರೈತರಿಗೆ ೩೧.೪೫ ಲಕ್ಷ ರೂಪಾಯಿಗಳನ್ನು ಕೊಡದೆ ವಂಚನೆ ಮಾಡಿದ್ದಾರೆ ಕೋಳಿ ಮರಿಗಳಿಗೆ ಒಂದನೆ ಬ್ಯಾಚ್, ಎರಡನೇ ಬ್ಯಾಚ್ ಅಂತ ಸುಳ್ಳು ಹೇಳಿಕೊಂಡು ವಂಚನೆ ಮಾಡಿದ್ದಾರೆ ನೇರವಾಗಿಯೇ ಆರ್.ಎಲ್ ಕಂಪನಿಗೆ ಸಂಬಂಧಿಸಿದವರನ್ನು ಭೇಟಿ ಮಾಡಿದರೆ ಅಸಮಂಜಸ ಉತ್ತರ ನೀಡಿದ್ದಾರೆ ಕೆಲವು ಸಂದರ್ಭಗಳಲ್ಲಿ ರೈತರನ್ನು ದೌರ್ಜನ್ಯದಿಂದ ನಡೆಸಿಕೊಂಡಿದ್ದು ಅಲ್ಲದೇ ನ್ಯಾಯ ಕೇಳಲು ಹೋದರೆ ಕಛೇರಿಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದರು.

ಕೋಳಿ ಸಾಕಾಣಿಕೆಗಾಗಿ ಕಂಪನಿಯಿಂದ ಮರಿಗಳು ಕೊಡುವ ಸಂದರ್ಭದಲ್ಲಿ ನಮ್ಮ ಬಳಿಯಿಂದ ಖಾಲಿ ಚೆಕ್ ಗಳನ್ನು ಪಡೆದಿದ್ದಾರೆ ಜೊತೆಗೆ ರೈತರ ಜಮೀನಿನ ಫಹಣಿ ಮತ್ತು ಇತರೆ ದಾಖಲೆಗಳನ್ನು ಪಡೆದಿದ್ದರೂ ಯಾವುದೇ ಹಣ ಕೊಟ್ಟಿಲ್ಲ ಒಂದಿಷ್ಟು ರೈತರಿಗೆ ಚೆಕ್ ಗಳನ್ನು ಕೊಟ್ಟಿದ್ದಾರೆ ಅವುಗಳನ್ನು ಬ್ಯಾಂಕ್ ನಲ್ಲಿ ಸಹ ತಡೆಹಿಡಿದ್ದಾರೆ ಕೇಳಿದರೆ ಒಡೆದು ಕಳಸಿದ್ದಾರೆ ನಮ್ಮಂತಹ ಎಷ್ಟೋ ಕೋಳಿ ಸಾಕಾಣಿಕೆದಾರರಿಗೆ ಇದೇ ರೀತಿಯಲ್ಲಿ ಮೋಸ ಮಾಡಿದ್ದಾರೆ ಕೂಡಲೇ ಆರ್.ಎಲ್ ಕಂಪನಿಯ ಮುಖ್ಯಸ್ಥ ಮೋಹನ್ ಕೃಷ್ಣ ಸೇರಿದಂತೆ ಇತರರ ವಿರುದ್ದ ಕಾನೂನು

ಕ್ರಮ ಕೈಗೊಂಡು ರೈತರಿಗೆ ಹಣ ಬಿಡುಗಡೆ ಮಾಡಿಸುವಂತೆ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್ ರವಿ ಇದು ಖಾಸಗಿ ಕಂಪನಿಗಳಿಂದ ಆಗಿರುವ ಸಮಸ್ಯೆಯಾಗಿದೆ ಕೂಡಲೇ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು ಪರಿಶೀಲನೆ ನಡೆಸಲಾಗುತ್ತದೆ ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೋಳಿ ಸಾಕಾಣಿಕೆಯ ರೈತರಾದ ರಾಜಪ್ಪ, ಎಸ್.ಕೆ ಬಸವರಾಜ್, ನವೀನ್ ಕುಮಾರ್, ಲಿಯಾಖತ್, ಜೂನೇದ್, ಕೃಷ್ಣೇಗೌಡ, ಇರೇಗೌಡ, ಶಾವಸ್, ಮಾರ್ಕೊಂಡಯ್ಯ, ಸಂದೀಪ್, ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande