ಬೆಂಗಳೂರು, 08 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಾಗತಿಕ ಆರ್ಥಿಕ ಅಸ್ಥಿರತೆ, ಮಾರುಕಟ್ಟೆ ಏರುಪೇರು, ಬಡ್ಡಿದರಗಳ ಬದಲಾವಣೆ ಇವೆಲ್ಲದರ ನಡುವೆಯೇ ಭಾರತ ಜಾಗತಿಕವಾಗಿ ತನ್ನ ಆರ್ಥಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹ ಕೂಡ $4.7 ಬಿಲಿಯನ್ ಏರಿಕೆ ಮೂಲಕ $703 ಬಿಲಿಯನ್ ಮೀರಿದ್ದು ಇತಿಹಾಸದಲ್ಲೇ ಗರಿಷ್ಠ ಮಟ್ಟದತ್ತ ಸಾಗುತ್ತಿದ್ದು, ದೇಶದ ಆರ್ಥಿಕ ಸುಸ್ಥಿರಕ್ಕೆ ನಿದರ್ಶನವಾಗಿದೆ.
2024ರ ಸೆಪ್ಟೆಂಬರ್ 27ರಂದು ಭಾರತ ವಿದೇಶಿ ವಿನಿಮಯ ಸಂಗ್ರಹದಲ್ಲಿ ದಾಖಲೆ ಸೃಷ್ಟಿಸಿ $705 ಬಿಲಿಯನ್ ತಲುಪಿತ್ತು. ಇದೀಗ 2025ರ ಜುಲೈ ನಂತರ $700 ಬಿಲಿಯನ್ ಗಡಿಯಲ್ಲಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು, ದೇಶದ ಆರ್ಥಿಕ ಸದೃಢತೆಗೆ ಬಲ ನೀಡಿದೆ. ವಿದೇಶಿ ವಿನಿಮಯ ಸಂಗ್ರಹ ನಿರಂತರ ಹೆಚ್ಚುತ್ತಲೇ ಇದ್ದು, $4.03 ಬಿಲಿಯನ್ ಇದ್ದದ್ದು $4.07ಕ್ಕೆ ಏರಿಕೆ ಕಂಡಿದೆ. ಇದು ಭಾರತದ ಆರ್ಥಿಕ ನೆಲೆಯ ಸುಭದ್ರತೆಯನ್ನು ಪ್ರದರ್ಶಿಸುತ್ತಿದೆ.
ವಿದೇಶಿ ಕರೆನ್ಸಿ ಬಲವಾದ ಕೊಡುಗೆ: ವರದಿಯೊಂದರ ಪ್ರಕಾರ ವಿದೇಶಿ ಕರೆನ್ಸಿ ಆಸ್ತಿಗಳು $2.5 ಬಿಲಿಯನ್ ಏರಿಕೆ ಕಂಡಿವೆ. ಇದು ಜಾಗತಿಕ ಮಾರುಕಟ್ಟೆಯ ಅಸ್ಥಿರತೆಗೆ ಭಾರತ ಬಲಿಷ್ಠ ಪ್ರತಿಸ್ಪಂದನೆಗೆ ಸ್ಪಷ್ಟ ಸಾಕ್ಷಿ. ಚಿನ್ನದ ಸಂಗ್ರಹ $2.1 ಬಿಲಿಯನ್ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರುಮುಖವಾದ ಈ ಸನ್ನಿವೇಶದಲ್ಲಿ ಹೂಡಿಕೆದಾರರು ಭಾರತವೇ ಬೆಸ್ಟ್ ಎಂದು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (SDRs) $33 ಮಿಲಿಯನ್ ಹೆಚ್ಚಳವಾಗಿ $18.8 ಬಿಲಿಯನ್ ತಲುಪಿದೆ. ಇದು ಭಾರತದ ಅಂತರಾಷ್ಟ್ರೀಯ ವಾಣಿಜ್ಯ ಸಾಮರ್ಥ್ಯವನ್ನು ವೃದ್ಧಿಸಿದೆ.
IMF ಸ್ಥಾನದಲ್ಲೂ ಭಾರತಕ್ಕೆ ಲಾಭ: ಅಂತರಾಷ್ಟ್ರೀಯ ಹಣಕಾಸು ನಿಧಿ (IMF)ಯಲ್ಲಿ ಸಹ ಭಾರತದ ಸ್ಥಾನಮಾನ ಸುಭದ್ರವಾಗಿದೆ. $9 ಮಿಲಿಯನ್ ಹೆಚ್ಚಳದಿಂದ $4.7 ಬಿಲಿಯನ್ ತಲುಪಿದೆ. ಇದರಿಂದ ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿ ಭಾರತದ ಪ್ರಭಾವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೋಯ್ದಿದೆ. ಇದು ವಿದೇಶಿ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಭಾರತವನ್ನು ವಿಶ್ವದ ಅತ್ಯಾಕರ್ಷಕ ಹೂಡಿಕೆ ತಾಣವನ್ನಾಗಿ ರೂಪಿಸಿದೆ.
ಜಾಗತಿಕ ಅಸ್ಥಿರತೆ ನಡುವೆಯೂ ಭಾರತ ಆರ್ಥಿಕ ಸ್ಥಿರತೆ:
ಜಾಗತಿಕವಾಗಿ ಆರ್ಥಿಕ ಸವಾಲುಗಳ ನಡುವೆಯೂ ಭಾರತ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ಗಟ್ಟಿಗೊಳಿಸಿಕೊಂಡಿದೆ. ದೇಶದ ಆರ್ಥಿಕ ಸಾಮರ್ಥ್ಯವನ್ನು ದೃಢಪಡಿಸಿದೆ. ವಿದೇಶಿ ವಿನಿಮಯ ಸಂಗ್ರಹದ ಏರಿಕೆ ಭಾರತದ ಹಣಕಾಸು ಭದ್ರತೆಗೆ ಬಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಹೂಡಿಕೆ ಮತ್ತು ಆರ್ಥಿಕ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa