ಮಲೇಷ್ಯಾಗೆ ಪ್ರಯಾಣ ಬೆಳೆಸಿದ ಭಾರತೀಯ ಜೂನಿಯರ್ ಹಾಕಿ ತಂಡ
ಬೆಂಗಳೂರು, 08 ಅಕ್ಟೋಬರ್ (ಹಿ.ಸ.) : ಆ್ಯಂಕರ್ : 13ನೇ ಆವೃತ್ತಿಯ ಸುಲ್ತಾನ್ ಆಫ್ ಜೊಹೋರ್ ಕಪ್ ಅಂತಾರಾಷ್ಟ್ರೀಯ ಜೂನಿಯರ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಮಂಗಳವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾಕ್ಕೆ ತೆರಳಿದ
Hockey team


ಬೆಂಗಳೂರು, 08 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : 13ನೇ ಆವೃತ್ತಿಯ ಸುಲ್ತಾನ್ ಆಫ್ ಜೊಹೋರ್ ಕಪ್ ಅಂತಾರಾಷ್ಟ್ರೀಯ ಜೂನಿಯರ್ ಹಾಕಿ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಮಂಗಳವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲೇಷ್ಯಾಕ್ಕೆ ತೆರಳಿದೆ. ಈ ಸ್ಪರ್ಧೆ ಅಕ್ಟೋಬರ್ 11 ರಿಂದ 18ರವರೆಗೆ ಜೋಹೋರ್ ಬಹ್ರೂನಲ್ಲಿ ನಡೆಯಲಿದೆ.

ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ, ಈ ಬಾರಿ ಕನಿಷ್ಠ ಫೈನಲ್ ಹಂತ ತಲುಪುವ ಗುರಿ ಹೊಂದಿದೆ. ಅನುಭವಿ ಮತ್ತು ಯುವ ಆಟಗಾರರ ಸಮತೋಲನದೊಂದಿಗೆ ತಂಡವು ಅಂತಾರಾಷ್ಟ್ರೀಯ ಮಟ್ಟದ ಬಲಿಷ್ಠ ಎದುರಾಳಿಗಳ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದೆ.

ಟೂರ್ನಮೆಂಟ್‌ನಲ್ಲಿ ಭಾರತವು ಅಕ್ಟೋಬರ್ 11ರಂದು ಗ್ರೇಟ್ ಬ್ರಿಟನ್ ವಿರುದ್ಧ ಅಭಿಯಾನ ಆರಂಭಿಸಲಿದೆ. ನಂತರ ಅಕ್ಟೋಬರ್ 12ರಂದು ನ್ಯೂಜಿಲೆಂಡ್, ಅಕ್ಟೋಬರ್ 14ರಂದು ಪಾಕಿಸ್ತಾನ, ಅಕ್ಟೋಬರ್ 15ರಂದು ಆಸ್ಟ್ರೇಲಿಯಾ ಮತ್ತು ಅಕ್ಟೋಬರ್ 17ರಂದು ಆತಿಥೇಯ ಮಲೇಷ್ಯಾ ವಿರುದ್ಧ ಆಡಲಿದೆ. ಲೀಗ್ ಹಂತದ ಅಗ್ರ ಎರಡು ತಂಡಗಳು ಅಕ್ಟೋಬರ್ 18ರಂದು ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande