ವಿಜಯಪುರ, 8 ಅಕ್ಟೋಬರ್ (ಹಿ.ಸ.)
ಆ್ಯಂಕರ್: ಆವಾಸ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುವುದು, ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ಝಮ್ ಝಮ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ತಲೆಮೇಲೆ ಕಲ್ಲು ಹೊತ್ತು ವಿಭಿನ್ನ ರೀತಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮೊಹ್ಮದ ಯೂಸೂಫ್ ಮಾತನಾಡಿ, ನಗರದ ಬಸವೇಶ್ವರನಗರ ಪ್ರದೇಶದಲ್ಲಿ ಸರ್ಕಾರದ ಅವಾಸ್ ಯೋಜನೆ ಅಡಿಯಲ್ಲಿ ಸುಮಾರು ಎರಡು ಮೂರು ವರ್ಷಗಳ ಹಿಂದೆ ಮನೆಗಳನ್ನು ನಿರ್ಮಿಸಿ ಪೂರ್ಣಗೊಳಿಸಲಾಯಿತು. ಆದರೆ ಇಂದಿನವರೆಗೂ ಈ ಮನೆಗಳಿಗೆ ವಿದ್ಯುತ್ ಸಂಪರ್ಕ, ರಸ್ತೆ ವ್ಯವಸ್ಥೆ, ಮತ್ತು ಮೂಲಭೂತ ಸೌಲಭ್ಯಗಳು ಒದಗಿಸಲಾಗಿಲ್ಲ. ಅದೇ ರೀತಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕೂಡ ಆಗಿಲ್ಲ ಎಂದು ಆರೋಪಿಸಿದರು.
ಬಾಗಲಕೋಟೆ, ಕಲಬುರ್ಗಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇದೇ ರೀತಿಯಾಗಿ ಅವಾಸ್ ಯೋಜನೆಯಡಿ ನಿರ್ಮಿತ ಮನೆಗಳನ್ನು ಹಂಚಿಕೆ ಮಾಡದೇ ಖಾಲಿ ಬಿಟ್ಟ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ತನಿಖೆ ನಡೆಸಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿತ್ತು.ಇಂತಹ ಕ್ರಮವನ್ನು ವಿಜಯಪುರದಲ್ಲಿಯೂ ಕೈಗೊಳ್ಳುವುದು ಅಗತ್ಯವಾಗಿದೆ.
ಈ ವಿಷಯದಲ್ಲಿ ಜಿಲ್ಲಾ ಆಡಳಿತ ತ್ವರಿತ ಕ್ರಮ ಕೈಗೊಳ್ಳದಿದ್ದರೆ, ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಒಟ್ಟಾಗಿ ಶಾಂತಿಪೂರ್ಣ ಪ್ರತಿಭಟನೆನಾವು ಕಾನೂನುಬದ್ಧ ಮತ್ತು ಪ್ರಜಾಪ್ರಭುತ್ವ ಮಾರ್ಗದಲ್ಲಿ ಹೋರಾಟ ಮುಂದುವರಿಸಬೇಕಾಗುತ್ತದೆ ಎಂದರು.
ಶಿವಗಂಗಾ ಕಟ್ಟಿಮನಿ, ಸವಿತಾ ಜಾಧವ, ಶೋಭಾ ರಾಠೋಡ, ದಾನಮ್ಮ ಕುಚನೂರ, ವೈಶಾಲಿ ಬಾಗೇವಾಡಿ, ವರ್ಷಾ,ಪಾರ್ವತಿಹಾವಿನಾಳ, ಯಾಸ್ಮೀನ ಕಲ್ಲೂರ, ಮಶಾಕ ಕವಲಗಿ, ಶಿವಮ್ಮಾ, ರೇಷ್ಮಾ ಖಾಜಿ, ಶ್ರೀದೇವಿ ಹಿರೇಮಠ, ರುಕ್ಸನಾ ಮುಲ್ಲಾ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande