ಕೋಲಾರ.೮ ಅಕ್ಟೋಬರ್ (ಹಿ.ಸ.)
ಆಂಕರ್ :
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪಶುವೈದ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕಿ ಅನುರಾಧ ಅವರು ಕೋಟ್ಯಾಂತರ ರೂಪಾಯಿಗಳ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ವತಿಯಿಂದ ನಗರದ ಪಶುಪಾಲನೆ ಇಲಾಖೆ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ ಬಡವರು ದಲಿತರ ಅಭಿವೃದ್ಧಿಗಾಗಿ ಇರುವ ಪಶುಪಾಲನೆ ಇಲಾಖೆಯಲ್ಲಿ ಭ್ರಷ್ಟಾಚಾರಿಗಳು ತುಂಬಿಕೊಂಡಿದ್ದಾರೆ ಸರ್ಕಾರದ ಕೆಲಸ ದೇವರ ಕೆಲಸವೆಂದೆಂದು ಹೇಳಿ ಬಿತ್ತ ಬಿತ್ತಾರವಾಗಿ ಭಾಷಣಗಳನ್ನು ಬೀಗುತ್ತಾ ಸಾರ್ವಜನಿಕರಿಗೆ ಮತ್ತು ಸಮಾಜಕ್ಕಾಗಿ ಅಭಿವೃದ್ಧಿಗಾಗಿ ಬಂದಂತಹ ಅನುದಾನಗಳನ್ನು ಕಬಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪಶುವೈದ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕಿ ಅನುರಾಧ ತಾಲ್ಲೂಕಿನ ಸುತ್ತಮುತ್ತ ಜಾನುವಾರುಗಳಿಗೆ ಸಕಾಲಕ್ಕೆ ಔಷಧೀಗಳ ಜೊತೆಗೆ ಚಿಕಿತ್ಸೆ ನೀಡದೆ ರೈತರಿಗೆ ಮೋಸ ಮಾಡಿದ್ದಾರೆ ಜೊತೆಗೆ ತಾಲ್ಲೂಕು ಪಂಚಾಯಿತಿ ಇಒ ಸರ್ವೇಶ್ ಅವರ ಪ್ರೇರಣೆಯೊಂದಿಗೆ ಎಸ್.ಸಿ.ಪಿ ಮತ್ತು ಟಿಎಸ್ಪಿ, ಪಶು ಭಾಗ್ಯ ಯೋಜನೆಯಲ್ಲಿ ಬಂದ ಅನುದಾನಗಳ ಕಡತಗಳನ್ನು ವಂಚಿಸಿ ಅಕ್ರಮ ಹಣ ಮಾಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದಿಂದ ಜೂನ್ ೨೦೨೨ ರಲ್ಲಿ ನಡೆದ ರಾಷ್ಟ್ರೀಯ ವಿಮಾ ಯೋಜನೆಯ ಅವ್ಯವಹಾರಗಳಲ್ಲಿ ಸುಮಾರು ೨,೫೩ ಲಕ್ಷ ಹಣ ರೈತರ ವಂತಿಗೆಯನ್ನು ಕಬಳಿಸಿದ್ದಾರೆ. ಬಿಪಿಎಲ್ ಪಡಿತರ ಚೀಟಿಗೆ ರೈತರಿಂದ ೩೦೦ ಮತ್ತು ೫೦೦ ರೂಪಾಯಿಗಳಂತೆ ಮಂತೆ ವಿವಾಹಣವನ್ನು ಪಡೆದು ವಿಮಾ ಹಣವನ್ನು ವಂಚನೆ ಮಾಡಿದ್ದಾರೆ ಅನುರಾಧ ಅವರ ಸೇವಾವಧಿಯಲ್ಲಿ ನಡೆದಂತಹ ಸಂಪೂರ್ಣವಾದ ಭ್ರಷ್ಟಾಚಾರದ ಕಡತಗಳನ್ನು ಲೋಕಾಯುಕ್ತರ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಜಿಲ್ಲಾ ಅಧ್ಯಕ್ಷ ಅಮರೇಶ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಮುಖಂಡರಾದ ಮಂಜುನಾಥ್ ಕೃಷ್ಣಮೂರ್ತಿ, ಶಂಕರ್ ನಾಗ್, ಮುನೇಂದ್ರಪ್ಪ, ಉಮಾರಾಣಿ ಮುಂತಾದವರು ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್