ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ 90 ದಿನಗಳ ಮಧ್ಯಸ್ಥಿಕೆ ಅಭಿಯಾನ
ವಿಜಯಪುರ, 8 ಅಕ್ಟೋಬರ್ (ಹಿ.ಸ.) ಆ್ಯಂಕರ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 1 ರಿಂದ ಅಕ್ಟೋಬರ್ 6ರವರೆಗೆ 90 ದಿನಗಳ ಮಧ್ಯಸ್ಥಿಕೆ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಜಿಲ್ಲೆಯಲ್ಲಿ 01 ಜಿಲ್ಲಾ ಹಾಗೂ 04 ತಾಲೂಕಾ ಮಧ್ಯಸ್ಥಿಕೆ ಕೇಂದ್ರಗಳು ಕಾರ್
ಕೋರ್ಟ್


ವಿಜಯಪುರ, 8 ಅಕ್ಟೋಬರ್ (ಹಿ.ಸ.)

ಆ್ಯಂಕರ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 1 ರಿಂದ ಅಕ್ಟೋಬರ್ 6ರವರೆಗೆ 90 ದಿನಗಳ ಮಧ್ಯಸ್ಥಿಕೆ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಜಿಲ್ಲೆಯಲ್ಲಿ 01 ಜಿಲ್ಲಾ ಹಾಗೂ 04 ತಾಲೂಕಾ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆ ಮತ್ತು ಕೌಟುಂಬಿಕ ನ್ಯಾಯಾಲಯಗಳು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಪಟ್ಟಿಯಲ್ಲಿರುವ ಮಧ್ಯಸ್ಥಿಕೆದಾರರೆಲ್ಲರೂ ಮಧ್ಯಸ್ಥಿಕೆ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಉತ್ತೇಜಿಸಲಾಯಿತು. ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಧೀಶರೊಂದಿಗೆ 10 ಸಭೆಗಳನ್ನು ನಡೆಸಿ, ಮಧ್ಯಸ್ಥಿಕೆ ಕೊಠಡಿಗಳು, ವಿ.ಸಿ. ಸೌಲಭ್ಯ, ಮಧ್ಯಸ್ಥಿಕೆ ಪ್ರಕರಣಗಳ ಉಲ್ಲೇಖ, ಈ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಲು ಮಧ್ಯಸ್ಥಿಕೆದಾರರನ್ನು ಮೇಲ್ವಿಚಾರಣೆ ಮಾಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿರ್ಣಯಗಳನ್ನು ಹೊರಡಿಸಲಾಗಿತ್ತು. 33 ಮಧ್ಯಸ್ಥಿಕೆದಾರರ ಭಾಗವಹಿಸುವಿಕೆಯಿಂದ ಪ್ರಕರಣಗಳ ಇತ್ಯರ್ಥ ಹಾಗೂ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರಮುಖ ಪಾತ್ರ ವಹಿಸಿತು.

ದಿನಾಂಕ : 01-07-2025 ರಂತೆ ವಿಜಯಪುರ ನ್ಯಾಯಾಲಯಗಳಲ್ಲಿ ಬಾಕಿ ಇರುವ 49,250 ಪ್ರಕರಣಗಳ ಪೈಕಿ 3228 ಪ್ರಕರಣಗಳನ್ನು ಗುರುತಿಸಿ ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಿ, ಅದರಲ್ಲಿ 906 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಂಡು 96 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು, ಜಿಲ್ಲಾ ಮಧ್ಯಸ್ಥಿಕೆ ಕೇಂದ್ರದಲ್ಲಿ 66 ಹಾಗೂ ತಾಲೂಕಾ ಕೇಂದ್ರಗಳಲ್ಲಿ 36 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಬಾಕಿ ಉಳಿದ ಪ್ರಕರಣಗಳ ಮಧ್ಯಸ್ಥಿಕೆ ವಹಿಸಬೇಕಾಗಿದ್ದು, ಜಿಲ್ಲೆಯ ಎಲ್ಲ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಈ ಪ್ರಕ್ರಿಯೆ ಮುಂದುವರಿಯಲಿದೆ.

90 ದಿನಗಳ ವಿಶೇಷ ಅಭಿಯಾನದಲ್ಲಿ 46 ವೈವಾಹಿಕ ಪ್ರಕರಣಗಳು, 3 ಕೌಟುಂಬಿಕ ಪ್ರಕರಣಗಳು, 33 ಪಾಲು ವಿಭಾಗ ಚಾವೆಗಳು, 7 ಚೆಕ್‍ಬೌನ್ಸ್ ಪ್ರಕರಣಗಳು ಸೇರಿದಂತೆ 5 ವರ್ಷಗಳು ಮತ್ತು ಮೇಲ್ಪಟ್ಟ 6, ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. 11 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಈ ವಿಶೇಷ ಅಭಿಯಾನ ಪ್ರಯೋಜನ ಪಡೆದಿದ್ದಾರೆ. 9 ದಂಪತಿಗಳನ್ನು ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆಯಲ್ಲಿ ಸಂಧಾನದ ಮೂಲಕ ಪುನರ್ಮಿಲನಗೊಳಿಸಲಾಗಿದೆ.

ಜಿಲ್ಲೆಯಲ್ಲಿ ನಡೆದ ಮಧ್ಯಸ್ಥಿಕೆ ವಿಶೇಷ ಅಭಿಯಾನದ ಯಶಸ್ವಿಗೆ ವ್ಯಾಪಕವಾಗಿ ಪ್ರಚಾರ ಕೈಗೊಂಡ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ನ್ಯಾಯಾಂಗ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಇತರ ಪಾಲುದಾರರು, ಸಾರ್ವಜನಿಕರ ಸಹಕಾರಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಾಧೀಶ ಹರೀಶ ಎ. ಅವರು ಪ್ರಕಟಣೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande