ಕರಾಟೆಯ ಮೂಲಕ ಗಿನ್ನೆಸ್ ದಾಖಲೆ ಮಾಡಿ, ಕೋಲಾರಕ್ಕೆ ಕೀರ್ತಿ ತಂದ ಲಕ್ಕೂರಿನ ಪುಟ್ಟ ಬಾಲಕ ತಾನೀಶ್.ಎನ್
ಕರಾಟೆಯ ಮೂಲಕ ಗಿನ್ನೆಸ್ ದಾಖಲೆ ಮಾಡಿ, ಕೋಲಾರಕ್ಕೆ ಕೀರ್ತಿ ತಂದ ಲಕ್ಕೂರಿನ ಪುಟ್ಟ ಬಾಲಕ ತಾನೀಶ್.ಎನ್
ವಿಶ್ವಮಟ್ಟದಲ್ಲಿ ಪರಿಚಿತವಾಗಿರುವ ೧೭ ವಿಶ್ವದಾಖಲೆಗಳ ಸರದಾರ, ಹೊಯ್ಸಳ ಪ್ರಶಸ್ತಿ ಪುರಸ್ಕೃತ ಸಾಧಕ ತಾನೀಶ್.ಎನ್ ಗೆ ಕರಾಟೆಯಲ್ಲಿ ಗಿನ್ನೆಸ್ ದಾಖಲೆ ಮಾಡಿರುತ್ತಾನೆ.


ಕೋಲಾರ, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತಮಿಳುನಾಡಿನ ಚೆನೈನಲ್ಲಿ ಆಕ್ಟೋಬರ್ ಐದರ ಭಾನುವಾರದಂದು ಎಸ್.ಐ.ವಿ.ಇ.ಟಿ ಕಾಲೇಜಿನ ಬೃಹತ್ ಸಭಾಂಗಣದಲ್ಲಿ ರಾಷ್ಟ್ರ ಮಟ್ಟದ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ಮೂಲಕ ನಡೆದ ಕರಾಟೆ ಸ್ಪರ್ಧೆಯಲ್ಲಿ ( ಲಾರ್ಜೆಸ್ಟ್ ಕಾಟೆ ಲೆಸನ್ ಇನ್ ಎ ಸಿಂಗಲ್ ವೇವ್) ನಲ್ಲಿ ವಿಶ್ವಮಟ್ಟದಲ್ಲಿ ಪರಿಚಿತವಾಗಿರುವ ೧೭ ವಿಶ್ವದಾಖಲೆಗಳ ಸರದಾರ, ಹೊಯ್ಸಳ ಪ್ರಶಸ್ತಿ ಪುರಸ್ಕೃತ ಸಾಧಕ ತಾನೀಶ್.ಎನ್ ಗೆ ಕರಾಟೆಯಲ್ಲಿ ಗಿನ್ನೆಸ್ ದಾಖಲೆ ಮಾಡಿರುತ್ತಾನೆ.

ಈ ಬಗ್ಗೆ ಮಾತನಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾನೀಶ್ ರವರ ತಾಯಿ ಶ್ರೀಮತಿ ಶ್ವೇತನಾಗರಾಜ್ ಮಾತನಾಡುತ್ತಾ ತಾನೀಶ್.ಎನ್ ೩೦ ನಿಮಿಷಗಳ ಕಾಲ ನಿರಂತರವಾಗಿ ಕರಾಟೆ ಹಂತಗಳನ್ನು ಪ್ರದರ್ಶಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕಠಿಣ ತರಬೇತಿ, ಸಂಪೂರ್ಣ ಸಮರ ಕಲೆಗಳ ಮೂಲಕ ಈ ಸಾಧನೆಯನ್ನು ಮಾಡಿದ್ದಾನೆ, ಇದು ನಮ್ಮ ನಾಡಿಗೆ, ದೇಶಕ್ಕೆ ಹೆಮ್ಮೆ ಎಂದರು.

ಈ ಬಗ್ಗೆ ಮಾತನಾಡಿದ ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷರು,ಯುವಕವಿಗಳು ಹಾಗೂ ತಂದೆ ಲಕ್ಕೂರು ಎಂ.ನಾಗರಾಜ್ ಮಾತನಾಡುತ್ತಾಪ್ರತಿಯೋರ್ವ ಯಶಸ್ವಿ ಸಾಧಕನ ಹಿಂದೆ ಮಾರ್ಗದರ್ಶಕರಿರುತ್ತಾರೆ. ಅದರಂತೆಯೇ ತನ್ನ ತಾಯಿ ಶ್ರೀಮತಿ ಶ್ವೇತ ನಾಗರಾಜ್ ಅವರ ನಿರಂತರ ಬೆಂಬಲ, ಸಮರ್ಪಣೆ ಮತ್ತು ಗುರುಗಳ ತರಬೇತಿಯಿಂದ ತಾನೀಶ್.ಎನ್ ಈ ಸಾಧನೆಯನ್ನು ಮಾಡಿದ್ದಾನೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande