ಹಮಾಸ್–ಇಸ್ರೇಲ್ ಮಾತುಕತೆ : ಸಕಾರಾತ್ಮಕ ಆರಂಭ
ಶರ್ಮ್ ಎಲ್-ಶೇಖ್, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗಾಜಾ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ಹಮಾಸ್ ಮತ್ತು ಇಸ್ರೇಲ್ ನಡುವಿನ ಮೊದಲ ಸುತ್ತಿನ ಮಾತುಕತೆ ಈಜಿಪ್ಟ್‌ನಲ್ಲಿ ಸಕಾರಾತ್ಮಕ ವಾತಾವರಣದಲ್ಲಿ ಮುಕ್ತಾಯಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಯೋಜನೆಯಡಿ ನಡೆಯುತ್ತಿ
Peace


ಶರ್ಮ್ ಎಲ್-ಶೇಖ್, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗಾಜಾ ಶಾಂತಿ ಪ್ರಕ್ರಿಯೆಗೆ ಸಂಬಂಧಿಸಿದ ಹಮಾಸ್ ಮತ್ತು ಇಸ್ರೇಲ್ ನಡುವಿನ ಮೊದಲ ಸುತ್ತಿನ ಮಾತುಕತೆ ಈಜಿಪ್ಟ್‌ನಲ್ಲಿ ಸಕಾರಾತ್ಮಕ ವಾತಾವರಣದಲ್ಲಿ ಮುಕ್ತಾಯಗೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಯೋಜನೆಯಡಿ ನಡೆಯುತ್ತಿರುವ ಈ ಚರ್ಚೆಗಳಲ್ಲಿ ಬಂಧಿತರು ಮತ್ತು ಕೈದಿಗಳ ವಿನಿಮಯ ಕ್ರಮ ಪ್ರಮುಖ ವಿಷಯವಾಗಿದೆ.

ಈಜಿಪ್ಟ್ ಮತ್ತು ಕತಾರ್ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾತುಕತೆಗಳು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯಲಿವೆ. ಹಮಾಸ್ ತನ್ನ ಬೇಡಿಕೆಯಲ್ಲಿ ಗಾಜಾದಿಂದ ಇಸ್ರೇಲಿ ಪಡೆಗಳ ಸಂಪೂರ್ಣ ಹಿಂತೆಗೆದುಕೊಳ್ಳುವಂತೆ, ಶಾಶ್ವತ ಕದನ ವಿರಾಮ ಮತ್ತು ಪ್ಯಾಲೆಸ್ಟೀನಿಯನ್ ಬಂಧಿತರ ಬಿಡುಗಡೆಗೆ ಒತ್ತಾಯಿಸಿದೆ.

ಯುದ್ಧ ಪ್ರಾರಂಭವಾದ ಬಳಿಕ ಗಾಜಾದಲ್ಲಿ 67 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದು, 1.7 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಮಾತುಕತೆಗಳು ಶಾಂತಿಗೆ ದಾರಿಯಾಯಿತೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande