ಕೈರೋ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಗಾಜಾ ಕದನ ವಿರಾಮ ಯೋಜನೆಯಡಿ ಇಂದು ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ಹಮಾಸ್ ಮತ್ತು ಇಸ್ರೇಲ್ ಮಾತುಕತೆ ನಡೆಯಲಿದೆ.
ಮಾತುಕತೆಯಲ್ಲಿ ಕೈದಿಗಳ ವಿನಿಮಯ, ಹಮಾಸ್ ಶಸ್ತ್ರಾಸ್ತ್ರ ಶರಣಾಗತಿ ಮತ್ತು ಒತ್ತೆಯಾಳುಗಳ ಬಿಡುಗಡೆ ಕುರಿತು ಚರ್ಚೆ ನಡೆಯಲಿದೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಕಳುಹಿಸಿರುವ ಉನ್ನತ ಮಟ್ಟದ ನಿಯೋಗ ಹಾಗೂ ಹಮಾಸ್ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮಾತುಕತೆ ವಿಫಲವಾದರೆ ಮಿಲಿಟರಿ ಕಾರ್ಯಾಚರಣೆ ಪುನರಾರಂಭವಾಗಬಹುದು ಎಂದು ಇಸ್ರೇಲ್ ಎಚ್ಚರಿಸಿದೆ. ಈಜಿಪ್ಟ್, ಜೋರ್ಡಾನ್, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳು ಟ್ರಂಪ್ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa