ಬಳ್ಳಾರಿ, 06 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಏಆರ್ – ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ವಿಶ್ವ ಆಹಾರ ದಿನ ಅಂಗವಾಗಿ “ಪರಂಪರೆಯ ತಿನಿಸುಗಳಲ್ಲಿ ಪೌಷ್ಟಿಕ ನವೀನತೆ” ಎಂಬ ವಿಷಯದಡಿ ಅಕ್ಟೋಬರ್ 16 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ ಕೇಂದ್ರದ ಆವರಣದಲ್ಲಿ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, ಅರ್ಹರು ಭಾಗವಹಿಸಲು ನೋಂದಾಯಿಸಿಕೊಳ್ಳಬಹುದು.
ಜಿಲ್ಲೆಯ ಪರಂಪರೆಯ ತಿನಿಸುಗಳ ಮೂಲಕ ಪೋಷಕಾಂಶಯುತ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ. ಭಾಗವಹಿಸುವವರು ತಮ್ಮ ಮನೆಯಲ್ಲೇ ಆಹಾರ ತಿನಿಸು ತಯಾರಿಸಿ, ಸಿದ್ಧವಾದ ತಿನಿಸನ್ನು ನಿಗದಿತ ದಿನದಂದು ಇದೇ ಕಚೇರಿಗೆ ತರಬೇಕು.
30 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದು, ಮೊದಲು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುತ್ತದೆ. ರೈತ ಮಹಿಳೆಯರು, ಸ್ವಯಂಸಹಾಯ ಗುಂಪು ಸದಸ್ಯರು, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಯುವಕರು ಭಾಗವಹಿಸಬಹುದಾಗಿದೆ.
ಸೂಚನೆ : ಒಂದು ತಿನಿಸು ಮಾತ್ರ ತಯಾರಿಸಬೇಕು, ಸ್ಥಳೀಯ ಪದಾರ್ಥಗಳನ್ನು ಬಳಸಬೇಕು. ಆಹಾರವು ಪೋಷಕಾಂಶ ಯುತವಾಗಿರಬೇಕು; ಹೆಚ್ಚು ಎಣ್ಣೆ, ಮೈದ ಪದಾರ್ಥಗಳ ಬಳಕೆ ತಪ್ಪಿಸಬೇಕು.
ಪ್ರದರ್ಶಿಸಲು ಸಿದ್ಧವಾದ ತಿನಿಸು ಸ್ವಚ್ಛವಾದ ಪಾತ್ರೆಯಲ್ಲಿ ತರಬೇಕು. ಪ್ರದರ್ಶನ ವೇಳೆಯಲ್ಲಿ ತಿನಿಸಿನ ಹೆಸರು, ಬಳಸಿದ ಪದಾರ್ಥಗಳು, ಪೋಷಕಾಂಶದ ಮಹತ್ವ ಮಾಹಿತಿ ನೀಡಬೇಕು. ಪೋಷಕ ಮೌಲ್ಯ, ರುಚಿ, ಪ್ರದರ್ಶನ ಮತ್ತು ಸ್ಥಳೀಯ ಪದಾರ್ಥಗಳ ಬಳಕೆ ಪ್ರಮಾಣಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ.
ಆಸಕ್ತರು ತಮ್ಮ ಹೆಸರು, ಗ್ರಾಮದ ಹೆಸರು ಮತ್ತು ತಿನಿಸಿನ ಶೀರ್ಷಿಕೆಯನ್ನು ಕೆಳಗಿನ ವಿಳಾಸಕ್ಕೆ ಅಥವಾ ದೂರವಾಣಿಯಲ್ಲಿ ನೋಂದಾಯಿಸಬಹುದು. ನೋಂದಾಯಿಸಿಕೊಳ್ಳಲು ಅಕ್ಟೋಬರ್ 13 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ತಾಲ್ಲೂಕಿನ ಹಗರಿಯ ಐಸಿಏಆರ್ – ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಗೃಹ ವಿಜ್ಞಾನಿ) ಅವರ ಮೊ.9535556509 ಗೆ ಸಂಪರ್ಕಿಸಬಹುದು ಎಂದು ಕೇಂದ್ರದ ಮುಖ್ಯಸ್ಥರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್