ಬಾಲಿವುಡ್ ನಿಂದ ಕಾಂತಾರ ಚಾಪ್ಟರ್‌೧ ಚಿತ್ರಕ್ಕೆ ಮೆಚ್ಚುಗೆ
ಬೆಂಗಳೂರು, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಾಂತಾರ ಚಾಪ್ಟರ್‌೧ ಚಿತ್ರಕ್ಕೆ ಬಾಲಿವುಡ್‌ ನಟ ರಿತೇಶ್ ದೇಶಮುಖ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕಾಂತಾರವನ್ನು IMAX ನಲ್ಲಿ ನೋಡಿದ್ದು ನಿಜಕ್ಕೂ ಒಂದು ಅದ್ಭುತ ಭಾರತೀಯ ಚಲನಚ
Ritesh


ಬೆಂಗಳೂರು, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಾಂತಾರ ಚಾಪ್ಟರ್‌೧ ಚಿತ್ರಕ್ಕೆ ಬಾಲಿವುಡ್‌ ನಟ ರಿತೇಶ್ ದೇಶಮುಖ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಕಾಂತಾರವನ್ನು IMAX ನಲ್ಲಿ ನೋಡಿದ್ದು ನಿಜಕ್ಕೂ ಒಂದು ಅದ್ಭುತ ಭಾರತೀಯ ಚಲನಚಿತ್ರ ವೀಕ್ಷಣೆಯ ಅನುಭವವಾಗಿತ್ತು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ರಿಷಬ್‌ ನೀವೊಬ್ಬ ಅದ್ಭುತ ವ್ಯಕ್ತಿ. ನಿಮ್ಮ ಅಭಿನಯವು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಉನ್ನತ ದರ್ಜೆಯ vfx, ಆಕ್ಷನ್, ಅತ್ಯುತ್ತಮ ಛಾಯಾಗ್ರಹಣ, ರೋಮಾಂಚಕ , ಧ್ವನಿ ವಿನ್ಯಾಸ, ನಿರ್ಮಾಣ ಎಲ್ಲವೂ ಅತ್ಯುತ್ತಮವಾಗಿದೆ.

ರುಕ್ಮಿಣಿ ವಸಂತ್‌ ಉತ್ತಮ ನಟಿ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಗುಲ್ಶನ್‌ ದೇವಯ್ಯ ನಿಮ್ಮ ದುಷ್ಟ ವ್ಯಕ್ತಿತ್ವದ ಅಭಿನಯ ಅಮಲೇರಿಸುವಷ್ಟು ಅದ್ಭುತವಾಗಿತ್ತು. ಈ ಬ್ಲಾಕ್‌ಬಸ್ಟರ್ ಯಶಸ್ಸಿಗೆ ಕಾರಣರಾದ ಹೊಂಬಾಳೆ ಫಿಲ್ಮ್‌ನವರಿಗೆ ಅಭಿನಂದನೆಗಳು. ಬ್ಲಾಕ್‌ಬಸ್ಟರ್ ಚಿತ್ರದ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದು ಶ್ಲಾಘಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande