ದೇಶದ ವೈಭವ ಪುನರುಜ್ಜೀವನದ ದಾರಿ ಹಿಡಿದಿದೆ : ಆರ್.ಎಸ್.ಎಸ್ ಸಹ ಸರಕಾರ್ಯವಾಹ ಕೃಷ್ಣಗೋಪಾಲ
ಹುಬ್ಬಳ್ಳಿ, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೇಶದ ಮೇಲೆ ಅನೇಕ ದಾಳಿಗಳು ನಡೆದರೂ, ಹಿಂದೂ ಸಮಾಜ ಸ್ವಾಭಿಮಾನದಿಂದ ಮತ್ತೆ ಎದ್ದು ನಿಂತಿದೆ. ಹಿಂದಿನ ವೈಭವ ಮರಳಿ ಬರುತ್ತಿದೆ. ಸೇವೆ, ಸಂಸ್ಕಾರ ಮತ್ತು ಶಿಕ್ಷಣದ ಮೂಲಕ ಸಂಘ ಸಮಾಜದ ವಿಕಾಸ ಕಾರ್ಯದಲ್ಲಿ ತೊಡಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ
Rss


ಹುಬ್ಬಳ್ಳಿ, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೇಶದ ಮೇಲೆ ಅನೇಕ ದಾಳಿಗಳು ನಡೆದರೂ, ಹಿಂದೂ ಸಮಾಜ ಸ್ವಾಭಿಮಾನದಿಂದ ಮತ್ತೆ ಎದ್ದು ನಿಂತಿದೆ. ಹಿಂದಿನ ವೈಭವ ಮರಳಿ ಬರುತ್ತಿದೆ. ಸೇವೆ, ಸಂಸ್ಕಾರ ಮತ್ತು ಶಿಕ್ಷಣದ ಮೂಲಕ ಸಂಘ ಸಮಾಜದ ವಿಕಾಸ ಕಾರ್ಯದಲ್ಲಿ ತೊಡಗಿದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ಕೃಷ್ಣಗೋಪಾಲ ಹೇಳಿದರು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಸಂಘ ಶತಮಾನೋತ್ಸವ ಹಾಗೂ ವಿಜಯದಶಮಿ ಪಥಸಂಚಲನ ಸಮಾರಂಭದಲ್ಲಿ ಅವರು ಮಾತನಾಡಿದರು.

“ದೇಶದ ಶ್ರೀಮಂತ ಪರಂಪರೆ, ಜ್ಞಾನ ಹಾಗೂ ಧನ ಸಂಪತ್ತು ಹಾಳಾದರೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಬದುಕಲು ಕಲಿತಿದೆ. ಲಕ್ಷಾಂತರ ಕಾರ್ಯಕರ್ತರು ಸಂಕಷ್ಟ ಅನುಭವಿಸಿದರೂ ಸಂಘ ಬೆಳೆಯಿತು. ಇಂದು ಪ್ರತಿಯೊಂದು ಗಲ್ಲಿಯಲ್ಲೂ ಶಾಖೆ ಸ್ಥಾಪನೆಯಾಗಿದ್ದು, ವಿದೇಶಗಳಲ್ಲಿಯೂ ಹಿಂದೂ ಒಗ್ಗಟ್ಟು ನಿರ್ಮಾಣವಾಗುತ್ತಿದೆ,” ಎಂದರು.

ಅವರು ಮುಂದುವರಿದು, “ಭಾರತ ವಿಶ್ವದ ಮಾದರಿಯಾಗುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಅಸ್ಥಿರತೆ ಇದ್ದರೂ ಭಾರತ ಸಮೃದ್ಧಿಯ ದಾರಿಯಲ್ಲಿ ಸಾಗುತ್ತಿದೆ. ಸ್ವಾವಲಂಬನೆ, ಸ್ವದೇಶಿ ಉತ್ಪಾದನೆ ಹೆಚ್ಚಾಗಿದ್ದು, ದೇಶ ಪರಂಪರೆ ಆಧಾರಿತ ಸುಸ್ಥಿರ ವಿಕಾಸದತ್ತ ಹೆಜ್ಜೆಯಿಡುತ್ತಿದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಮಾತನಾಡಿ, “ಇದು ಜೀವನದ ಅವಿಸ್ಮರಣೀಯ ಕ್ಷಣ. ಸಂಘದ ನೂರು ವರ್ಷದ ಪಯಣ ರಾಷ್ಟ್ರಪ್ರೇಮ ಮತ್ತು ಏಕತೆಯ ಸಂಕೇತವಾಗಿದೆ. ಯುವಕರು ನೈತಿಕತೆ ಹಾಗೂ ದೇಶಭಕ್ತಿಯನ್ನು ಅಳವಡಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವ್ಯಾಪಾರಿ ವಿ.ಎಸ್.ವಿ. ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗ ಸಂಘಚಾಲಕ ಗೋವಿಂದ ಗೌಡಪ್ಪಗೊಳ, ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ಮಹಾನಗರ ಸಂಘಚಾಲಕ ಶಿವಾನಂದ ಅವಟಿ, ಮಹಾನಗರ ಕಾರ್ಯವಾಹ ಮಲ್ಲಿಕಾಜಪ್ಪ ಹಳಿಮಣಿ ಸೇರಿದಂತೆ ಹಲವು ಸಂಘ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande