ಕಾವ್ಯದಿಂದ ಸಮನ್ವತೆಯ ನಾಡನ್ನು ಕಟ್ಟಲು ಸಾಧ್ಯ : ಡಾ. ಶಿರಗಾನಳ್ಳಿ ಶಾಂತಾನಾಯ್ಕ್
ಬಳ್ಳಾರಿ, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಾವ್ಯದಿಂದ ಸಹಿಷ್ಣುತೆ ಮತ್ತು ಸಮನ್ವಯತೆಯ ನಾಡನ್ನು ಕಟ್ಟಲು ಸಾಧ್ಯವೆಂದು ಕವಿಗಳು ಅಕ್ಷರಗಳಲ್ಲಿ ಸಾಧ್ಯವಾಗಿಸಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿರಗಾನಳ್ಳಿ ಶಾಂತಾನಾಯ್ಕ್ ಅವರು ತಿಳಿಸಿದ್ದಾರೆ. ಬಳ್ಳ
ಕಾವ್ಯದಿಂದ ಸಮನ್ವತೆಯ ನಾಡನ್ನು ಕಟ್ಟಲು ಸಾಧ್ಯ :  ಡಾ. ಶಿರಗಾನಳ್ಳಿ ಶಾಂತಾನಾಯ್ಕ್


ಕಾವ್ಯದಿಂದ ಸಮನ್ವತೆಯ ನಾಡನ್ನು ಕಟ್ಟಲು ಸಾಧ್ಯ :  ಡಾ. ಶಿರಗಾನಳ್ಳಿ ಶಾಂತಾನಾಯ್ಕ್


ಬಳ್ಳಾರಿ, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಾವ್ಯದಿಂದ ಸಹಿಷ್ಣುತೆ ಮತ್ತು ಸಮನ್ವಯತೆಯ ನಾಡನ್ನು ಕಟ್ಟಲು ಸಾಧ್ಯವೆಂದು ಕವಿಗಳು ಅಕ್ಷರಗಳಲ್ಲಿ ಸಾಧ್ಯವಾಗಿಸಿದ್ದಾರೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿರಗಾನಳ್ಳಿ ಶಾಂತಾನಾಯ್ಕ್ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಸಂಸ್ಕಾರ ಭಾರತಿ ಬಳ್ಳಾರಿ ಮಹಾನಗರ ಇವರ ಜಂಟಿ ಸಹಯೋಗದಲ್ಲಿ ನಡೆದ `ಡಾ. ಎಸ್.ಎಲ್. ಭೈರಪ್ಪ ಸ್ಮರಣೆ ಹಾಗೂ ನಾಡಹಬ್ಬ ದಸರಾ ಕವಿಗೋಷ್ಠಿ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿಗಳು ತಮ್ಮ ಆತ್ಮಭಾವದಿಂದ ಸಾಮಾಜಿಕ ಸಮಸ್ಯೆಗಳನ್ನು ಗ್ರಹಿಸಿ ಸಮ ಸಮಾಜದ ನಿರ್ಮಾಣಕ್ಕಾಗಿ ಕಾವ್ಯ ಕಟ್ಟುತ್ತಾರೆ. ಕವಿಗಳು ಶಬ್ದಗಳ ಜೊತೆ ನಿರಂತರ ನಾನಾ ಭಾವಗಳಿಂದ ಮನಸ್ಸಿಗೆ ಆನಂದವಾಗುವ ಕಾವ್ಯ ರಚಿಸಿ ಸಹೃದಯರ ಹೃದಯ ತಲುಪಿ, ಸಹೃದಯರ ನಾಡನ್ನು ಕಟ್ಟುತ್ತಾರೆ ಎಂದರು.

ಎಸ್.ಎಲ್. ಭೈರಪ್ಪ ಅವರು ಅಭಿಜಾತ ಕಾದಂಬರಿಕಾರರು. ಒಂದು ತಲೆಮಾರಿಗೆ ಓದುವ ಅಭಿರುಚಿ ಬೆಳೆಸಿದವರು. ಭೈರಪ್ಪ ಅವರ 25ಕ್ಕೂ ಹೆಚ್ಚು ಕಾದಂಬರಿಗಳು ವಿಭಿನ್ನ ನೆಲೆ, ವಿಭಿನ್ನವಾದ ಕಥಾವಸ್ತು ಮತ್ತು ವಿಭಿನ್ನ ಶೈಲಿಯ ಬರಹದಿಂದ ಓದುಗರನ್ನು ಮನಸೂರೆಗೊಂಡಿವೆ ಎಂದರು.

ಪ್ರಾಧ್ಯಾಪಕ ಡಾ.ಸಿ. ಕೊಟ್ರೇಶ್ ಅವರು, ಎಸ್.ಎಲ್. ಭೈರಪ್ಪ ಅವರ ಬರಹ ಕುತೂಹಲಕಾರಿಯಾಗಿ ಓದುಗರನ್ನು ಸೆರೆ ಹಿಡಿಯುತ್ತದೆ. ಭೈರಪ್ಪ ಅವರ ದಾಟು, ಪರ್ವ, ಅಂಚು, ಯಾನ, ವಂಶವೃಕ್ಷ, ಮತದಾನ, ನಾಯಿ ನೆರಳು, ಮಂದ್ರ, ಭಿತ್ತಿ ಕನ್ನಡ ಸಾಹಿತ್ಯ ಕ್ಷೇತ್ರವಲ್ಲದೇ, ವಿವಿಧ ಭಾಷೆಗಳಲ್ಲೂ ವಿಸ್ತರಣೆಗೊಂಡಿವೆ ಎಂದರು.

ಕತೆಗಾರ ಡಾ. ಸಂಪಿಗೆ ನಾಗರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಕಾವ್ಯವನ್ನು ಓದಿ ಓದುಗ ಆನಂದಪಟ್ಟಾಗ ಕಾವ್ಯದ ಸಫಲತೆ ಸಾಧಿಸಲಿದೆ. ಸಾಹಿತಿ ಕಾಲವನ್ನು ತಡೆದು ನಿಲ್ಲಿಸುವ ಶಕ್ತಿಯನ್ನು ಪಡೆದಾಗಲೇ

ಕಾವ್ಯ ಸರ್ವಕಾಲಿಕವಾಗಿ ಉಳಿಯಲಿದೆ. ಪಂಪ, ಪೆÇನ್ನ, ರನ್ನ, ಜನ್ನ, ಕುಮಾರವ್ಯಾಸ ಅವರಂಥಹ ಬರಹದಲ್ಲಿ

ಇಂಥಹಾ ಶಕ್ತಿ ಇದೆ. ಸಾಮಥ್ರ್ಯವಿದೆ ಎಂದರು.

ಕವಿಗೋಷ್ಠಿಯಲ್ಲಿ ಕೆ. ಸುಂಕಪ್ಪ, ಡಾ.ಕೆ. ಬಸಪ್ಪ, ಡಾ. ತಿಪ್ಪೇರುದ್ರ ಸಂಡೂರು, ಡಾ. ಭ್ರಮರಾಂಭ, ಹೆಚ್.ಎಂ. ಉಮಾ, ಎ.ಎರ್ರಿಸ್ವಾಮಿ, ಕೆ.ವಿ. ನಾಗಿರೆಡ್ಡಿ, ಆಲಂಭಾಷ, ಎ.ಎಂ.ಪಿ. ವೀರೇಶಸ್ವಾಮಿ, ಎ. ಮಲ್ಲಿಕಾರ್ಜುನ್,ಸಂತೋಷ್, ಗೋಡೆ ಶಿವರಾಜ್, ರಾಮರಾವ್ ಕುಲಕರ್ಣಿ, ಈರಮ್ಮ, ಕೆ.ಪಿ. ಮಂಜುನಾಥ ರೆಡ್ಡಿ, ಸಿ.ಎಂ. ಮಂಜುನಾಥ್ ಸೇರಿದಂತೆ 20ಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡು ಕವನ ವಾಚಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಆರ್. ಮಂಜುನಾಥ್, ಡಾ. ಕೆ.ಎನ್. ದಿವ್ಯಾ ಅವರು ಮುಖ್ಯ ಅತಿಥಿಗಳಾಗಿದ್ದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕೆ. ಸುಂಕಪ್ಪ ಸ್ವಾಗತಿಸಿದರು. ಕುಮಾರಿ ವಿಭಾ ಕುಲಕರ್ಣಿ ಪ್ರಾರ್ಥಿಸಿದರು. ಉಪನ್ಯಾಸಕರಾದ ಎ.ಎಂ.ಪಿ.ವೀರೇಶ ಸ್ವಾಮಿ ಮತ್ತು ಚಾಂದ್ ಪಾಷಾ ಕಾರ್ಯಕ್ರಮ ನಿರ್ವಹಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande