ಪಹಲ್ಗಾಮ್ ದಾಳಿಗೆ ನೆರವು ನೀಡಿದ ಓರ್ವನ ಬಂಧನ
ಶ್ರೀನಗರ, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಸಂಭವಿಸಿದ ದಾಳಿಯಲ್ಲಿ ಭಾಗವಹಿಸಿದ್ದ ಭಯೋತ್ಪಾದಕರಿಗೆ ಸಹಾಯ ಮಾಡಿದ ಮೋಹಮ್ಮದ್ ಯೂಸುಫ್ ಕಟಾರಿ (26) ಎಂಬಾತನನ್ನು ಬಂಧಿಸಿದೆ. ಜುಲೈನಲ್ಲಿ ಪ್ರಾರಂಭವಾದ ಆಪರೇಷನ್ ಮಹಾದೇವ್ ಕಾರ್ಯಾಚರ
ಪಹಲ್ಗಾಮ್ ದಾಳಿಗೆ ನೆರವು ನೀಡಿದ ಓರ್ವನ ಬಂಧನ


ಶ್ರೀನಗರ, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಸಂಭವಿಸಿದ ದಾಳಿಯಲ್ಲಿ ಭಾಗವಹಿಸಿದ್ದ ಭಯೋತ್ಪಾದಕರಿಗೆ ಸಹಾಯ ಮಾಡಿದ ಮೋಹಮ್ಮದ್ ಯೂಸುಫ್ ಕಟಾರಿ (26) ಎಂಬಾತನನ್ನು ಬಂಧಿಸಿದೆ.

ಜುಲೈನಲ್ಲಿ ಪ್ರಾರಂಭವಾದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ವೇಳೆ, ಪಹಲ್ಗಾಮ್ ದಾಳಿಯಲ್ಲಿ ಭಾಗವಹಿಸಿದ್ದ ಮೂವರು ಭಯೋತ್ಪಾದಕರು ಶ್ರೀನಗರ ಹೊರವಲಯದ ಜಬರ್ವಾನ್ ಬೆಟ್ಟಗಳಲ್ಲಿ ಕೊಲ್ಲಲ್ಪಟ್ಟಿದ್ದರು. ವಿಚಾರಣೆಯಲ್ಲಿ, ಕಟಾರಿ ಭಯೋತ್ಪಾದಕರನ್ನು ನಾಲ್ಕು ಬಾರಿ ಭೇಟಿಯಾಗಿದ್ದು, ಭಯೋತ್ಪಾದಕರಿಗೆ ಫೋನ್ ಚಾರ್ಜರ್ ಒದಗಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande