ನವದೆಹಲಿ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕಳೆದ ಎರಡು ವಾರಗಳಿಂದ ಪ್ರಾಥಮಿಕ ಷೇರು ಮಾರುಕಟ್ಟೆ ಚಟುವಟಿಕೆಯಿಂದ ಕಂಡುಬಂದಿದ್ದು, ಮುಂದಿನ ವಾರದಿಂದ ಅದರ ತೀವ್ರತೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಈ ಅವಧಿಯಲ್ಲಿ ಒಟ್ಟು ಐದು ಹೊಸ ಐಪಿಒಗಳು ಹೊರಬರುತ್ತಿದ್ದು, ಅವುಗಳಲ್ಲಿ ನಾಲ್ಕು ಮೆನ್‌ಬೋರ್ಡ್ ಹಾಗೂ ಒಂದು ಎಸ್‌ಎಂಇ ಸೆಗ್ಮೆಂಟ್ಗೆ ಸೇರಿವೆ.
ಅಕ್ಟೋಬರ್ 6ರಂದು ಟಾಟಾ ಕ್ಯಾಪಿಟಲ್ ಕಂಪನಿಯ ₹15,511.87 ಕೋಟಿಯ ಐಪಿಓ ತೆರೆಯಲಿದ್ದು, ಅಕ್ಟೋಬರ್ 8ರವರೆಗೆ ಹೂಡಿಕೆದಾರರು ಚಂದಾದಾರರಾಗಬಹುದು. ಪ್ರತಿ ಷೇರು ಬೆಲೆ ₹310–₹326 ನಿಗದಿಯಾಗಿದೆ.
ಅಕ್ಟೋಬರ್ 7ರಂದು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ₹11,607.01 ಕೋಟಿಯ ಪಬ್ಲಿಕ್ ಇಶ್ಯೂ ತೆರೆಯಲಿದೆ. ಇದೇ ದಿನ ಅನಂತಂ ಹೈವೇಜ್ ಟ್ರಸ್ಟ್ ₹400 ಕೋಟಿಯ ಇಶ್ಯೂ ಹಾಗೂ ಮಿತ್ತಲ್ ಸೆಕ್ಷನ್ಸ್ ₹52.91 ಕೋಟಿಯ ಐಪಿಒ ಕೂಡ ತೆರೆಯಲಿದೆ. ಅಕ್ಟೋಬರ್ 9ರಂದು ರುಬಿಕಾನ್ ರಿಸರ್ಚ್ ₹1,377.50 ಕೋಟಿಯ ಐಪಿಒ ಪ್ರಾರಂಭವಾಗಲಿದೆ.
ಇದೇ ವೇಳೆ ಈಗಾಗಲೇ ತೆರೆಯಲ್ಪಟ್ಟ ಡಿಎಸ್‌ಎಂ ಫ್ರೆಶ್ ಫುಡ್ಸ್, ಗ್ರೀನ್‌ಲೀಫ್ ಎನ್ವೈರೋಟೆಕ್, ಶ್ಲೋಕಾ ಡೈಸ್, ಹಾಗೂ ವೀವರ್ಕ್ ಇಂಡಿಯಾ ಮ್ಯಾನೇಜ್ಮೆಂಟ್ ಕಂಪನಿಗಳ ಐಪಿಒಗಳು ಮುಂದಿನ ವಾರವೂ ಚಂದಾದಾರಿಕೆಗಾಗಿ ತೆರೆದಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa