ಬೆಂಗಳೂರು, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಿ ಕಾನೂನು ಜಾರಿ ಮಾಡಿ ಶಿಕ್ಷೆಗೆ ಒಳಪಡಿಸಿದರೆ ಅದು ಸಾಧ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿರುವ ಅವರು, ಕೋರಮಂಗಲದಲ್ಲಿ ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಿದಾಗಲು ಕೂಡ ಅವ್ಯಾಹತವಾಗಿ ಪೊಲಿಸರ ಕಣ್ಣ ಕೆಳಗಡೆ ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದ್ದಾರೆ. ಇದು ಆನ್ ಲೈನ್ ಬೆಟ್ಟಿಂಗ್ ಮಾಡುವವರು ಮತ್ತು ಪೊಲಿಸರು ಸರ್ಕಾರದ ನಡುವೆ ಇರುವ ಸಂಬಂಧ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಇದ್ದಾಗ ಆನ್ ಲೈನ್ ಬೆಟ್ಟಿಂಗ್ ವಿರುದ್ದ ನಾನ್ ಬೇಲೆಬಲ್ ಕೇಸ್ ಮಾಡಿ ಕಠಿಣ ಕಾನೂನು ಜಾರಿ ಮಾಡಿದ್ದೇವು. ಅದು ಸುಪ್ರೀಂ ಕೋರ್ಟ್ ನಲ್ಲಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಲು ಆನ್ ಲೈನ್ ಬೆಟ್ಟಿಂಗ್ ತಡೆದು ಬಡವರು ಅದಕ್ಕೆ ಬಲಿಯಾಗುವುದನ್ನು ತಡೆಯುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್ ನಲ್ಲಿ ಇರುವ ಕೇಸಿನ ಬಗ್ಗೆ ಕ್ರಮ ವಹಿಸಿ ಕಾನೂನು ಜಾರಿ ಮಾಡಿ ಶಿಕ್ಷೆಗೆ ಒಳಪಡಿಸಿದರೆ ಅದು ಸಾಧ್ಯವಿದೆ. ಆದರೆ ಎರಡೂವರೆ ವರ್ಷವಾದರೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದೇ ಈ ಸರ್ಕಾರ ಸಂಪೂರ್ಣ ಆನ್ ಲೈನ್ ಬೆಟ್ಟಿಂಗ್ ಪರ ಇದೆ ಎನ್ನುವುದು ಗೊತ್ತಾಗುತ್ತದೆ ಇದನ್ನು ತೀರ್ವವಾಗಿ ಖಂಡಿಸುತ್ತೇವೆ. ಮತ್ತೆ ಎಲ್ಲ ಬಡವರ, ಯುವಕರ ಪರವಾಗಿ ಆನ್ ಲೈನ್ ಬೆಟ್ಟಿಂಗ್ ಬ್ಯಾನ್ ಮಾಡುವ ಕೇಂದ್ರದ ಕಾನೂನು ಜಾರಿ ಮಾಡಬೇಕು ಮತ್ತು ಕರ್ನಾಟಕದ ಕಾನೂನಿಗೆ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಅದಕ್ಕೆ ಶಕ್ತಿ ತುಂಬಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa