ದೇಶದಲ್ಲಿ ತೀವ್ರ ಆರ್ಥಿಕ ಅಸಮಾನತೆ : ಕಾಂಗ್ರೆಸ್ ಆರೋಪ
ನವದೆಹಲಿ, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಆರ್ಥಿಕ ಅಸಮಾನತೆ ವೇಗವಾಗಿ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಕೇಂದ್ರ ಸರ್ಕಾರದ ನೀತಿಗಳು ಆಯ್ದ ಕೆಲವರ ಕೈಯಲ್ಲಿ ಸಂಪತ್ತನ್ನು ಕೇಂದ್ರೀಕರಿಸುತ್ತಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಎಕ್ಸ
Ramesh


ನವದೆಹಲಿ, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಆರ್ಥಿಕ ಅಸಮಾನತೆ ವೇಗವಾಗಿ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಕೇಂದ್ರ ಸರ್ಕಾರದ ನೀತಿಗಳು ಆಯ್ದ ಕೆಲವರ ಕೈಯಲ್ಲಿ ಸಂಪತ್ತನ್ನು ಕೇಂದ್ರೀಕರಿಸುತ್ತಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಎಕ್ಸ್ ಖಾತೆಯಲ್ಲಿ ಆರೋಪಿಸಿರುವ ಅವರು, ದೇಶದ ಅರ್ಧದಷ್ಟು ಸಂಪತ್ತು ಕೇವಲ 1,687 ಜನರ ಕೈಯಲ್ಲಿ ಇದೆ. ಲಕ್ಷಾಂತರ ಭಾರತೀಯರು ದಿನನಿತ್ಯದ ಅಗತ್ಯ ಪೂರೈಸಲು ಹೋರಾಡುತ್ತಿದ್ದಾರೆ ಎಂದಿದ್ದಾರೆ

ಸರ್ಕಾರದ ನೀತಿಗಳು ಕೆಲ ಕೈಗಾರಿಕೋದ್ಯಮಿಗಳಿಗೆ ಲಾಭಕರವಾಗಿದ್ದು, ಆರ್ಥಿಕತೆಯ ಬೆನ್ನೆಲುಬಾದ ಎಂಎಸ್ಎಂಇ ವಲಯ ಒತ್ತಡದಲ್ಲಿದೆ. ಸಾಮಾನ್ಯ ಜನರ ಆದಾಯದ ಅವಕಾಶಗಳು ಕುಗ್ಗುತ್ತಿದ್ದು, ಹಣದುಬ್ಬರ, ಸಾಲದ ಹೊರೆಗಳು ಹೆಚ್ಚುತ್ತಿವೆ. ಇದೇ ವೇಳೆ ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಭದ್ರತಾ ಹೂಡಿಕೆಗಳು ಕಡಿಮೆಯಾಗುತ್ತಿವೆ ಎಂದರು.

ಮನರೇಗಾ ಯೋಜನೆಯಲ್ಲಿ ವೇತನ ಬಿಕ್ಕಟ್ಟು ಮತ್ತು ಕಾರ್ಮಿಕರಿಗೆ ಸಕಾಲಿಕ ಪಾವತಿಯ ಕೊರತೆಯೂ ಈ ಅಸಮಾನ ನೀತಿಯ ಉದಾಹರಣೆ ಎಂದು ಅವರು ಹೇಳಿದ್ದು, ಈ ಪ್ರವೃತ್ತಿ ಮುಂದುವರಿದರೆ ಭಾರತವು ಆರ್ಥಿಕ ಅಸಮಾನತೆ ಮತ್ತು ದುರ್ಬಲ ಪ್ರಜಾಪ್ರಭುತ್ವದಿಂದ ರಾಜಕೀಯ ಅಸ್ಥಿರತೆಗೆ ಒಳಗಾಗುವ ದೇಶಗಳ ಪಟ್ಟಿಗೆ ಸೇರುವ ಅಪಾಯವಿದೆ ಎಂದು ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande