ಬೆಂಗಳೂರು, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ತಮ್ಮ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಭಾಷಣದಲ್ಲಿ ನಾವು ಬಸವಣ್ಣನ ವಿಚಾರಗಳನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾತಲ್ಲಿ ಮಾತ್ರ ಬಣವಣ್ಣ ಕೃತಿಯಲ್ಲಿ ಬಸವಣ್ಣ ಮತ್ತು ಕನಕದಾಸರ ತತ್ವಗಳ ವಿರುದ್ದ ನಡೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಸವಣ್ಣ ಎಲ್ಲ ಕಾಯಕ ಸಮುದಾಯ ಒಗ್ಗೂಡಿಸಿ ಕಾಯಕ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಸಮಾನತೆ ತರುವ ಕೆಲಸ ಮಾಡಿದ್ದರು. ಆದರೆ ಇವರು ಜಾತಿ ಸಮೀಕ್ಷೆಯಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸಿ ಬಸಣವಣ್ಣನವರ ತದ್ವಿರುದ್ದವಾಗಿ ನಡೆಯುತ್ತಿದ್ದಾರೆ. ಅದೆ ರೀತಿ ಕನಕದಾಸರು ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯ ನೀವು ಬಲ್ಲಿರಾ ಎಂದು ಹೇಳಿದ್ದರು. ಅದರ ತದ್ವಿರುದ್ದವಾಗಿ ಇವರು ನಡೆದುಕೊಳ್ಳುತ್ತಿದ್ದಾರೆ. ಕುಲದ ಆಧಾರದ ಮೇಲೆ ಬದುಕಿಲ್ಲ. ಹುಟ್ಟು ಯಾರ ಕೈಯಲ್ಲಿ ಇಲ್ಲ ಬದುಕಿನಲ್ಲಿ ಸಮಾನತೆ ತರಬೇಕೆಂಬ ಕನಕದಾಸದ ಚಿಂತನೆಗೆ ಕುಲದ ಅಧಾರದ ಮೇಲೆ ಅಧಿಕಾರ ಮಾಡುತ್ತಿರುವ ಸಿಎಂಗೆ ಏನು ಹೇಳಬೇಕು. ಜಾತಿ ಸಮೀಕ್ಷೆ ತಮ್ಮ ರಾಜಕೀಯ ಉಳಿವಿಗೆ ಮತ್ತು ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಜಾತಿ ಗಣತಿ ವಿವರ ಕೇಳಿ ಹೌಹಾರಿದ್ದಾರೆ. ಇದು ಸಮೀಕ್ಷೆಯಲ್ಲ, ಒಂದು ರೀತಿಯಲ್ಲಿ ಪ್ರತಿಯೊಬ್ಬ ನಾಗರಿಕರ ತನಿಖೆ ಮಾಡಿ ವಯಕ್ತಿಕ ಬದುಕಿನಲ್ಲಿ ಮಧ್ಯ ಪ್ರವೇಶ ಮಾಡುವ ರೀತಿಯಲ್ಲಿದೆ. ಇಡಿ ಕೂಡ ಇಷ್ಟು ವಿವರ ಕೇಳಿಲ್ಲ. ಅಷ್ಟು ವಿವರ ಜಾತಿ ಸಮೀಕ್ಷೆಯಲ್ಲಿದೆ. ಇಡಿ ಕೇಳದಷ್ಟು ಪ್ರಶ್ನೆಗಳನ್ನು ನೋಡಿ ಡಿ.ಕೆ. ಶಿವಕುಮಾರ ಹೌಹಾರಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa