ಭಾರತ ಶಕ್ತಿ, ತ್ಯಾಗದ ಸಂಸ್ಕೃತಿಯ ಪ್ರತೀಕ : ಅರುಣ್ ಕುಮಾರ್
ಇಂದೋರ್, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ ಕಾರ್ಯವಾಹ ಅರುಣ್ ಕುಮಾರ್ ಅವರು ಭಾರತ ಒಂದು ಸರ್ಕಾರದ ಉಡುಗೊರೆ ಅಲ್ಲ ಸಾವಿರಾರು ವರ್ಷಗಳ ತಪಸ್ಸು, ತ್ಯಾಗ ಮತ್ತು ಸಂಸ್ಕೃತಿಯ ಫಲ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನ ಐತಿಹಾಸಿಕ ಡೆಲಿ ಕಾಲೇಜ
Rss


ಇಂದೋರ್, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಹ ಕಾರ್ಯವಾಹ ಅರುಣ್ ಕುಮಾರ್ ಅವರು ಭಾರತ ಒಂದು ಸರ್ಕಾರದ ಉಡುಗೊರೆ ಅಲ್ಲ ಸಾವಿರಾರು ವರ್ಷಗಳ ತಪಸ್ಸು, ತ್ಯಾಗ ಮತ್ತು ಸಂಸ್ಕೃತಿಯ ಫಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನ ಐತಿಹಾಸಿಕ ಡೆಲಿ ಕಾಲೇಜಿನಲ್ಲಿ ನಡೆದ ಸಂಘದ ಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ರಾಷ್ಟ್ರ ಯಾರದ್ದು ಎಂಬ ಪ್ರಶ್ನೆಯೇ ಅಸ್ವಸ್ಥ ಮನೋಭಾವದ ಸಂಕೇತ. ಈ ದೇಶವನ್ನು ಋಷಿಗಳು, ಯೋಧರು, ರೈತರು ಮತ್ತು ತಾಯಂದಿರು ತಮ್ಮ ತ್ಯಾಗದಿಂದ ನಿರ್ಮಿಸಿದ್ದಾರೆ” ಎಂದು ಹೇಳಿದರು.

ರಾಷ್ಟ್ರಪ್ರೇಮ ಅಂದರೆ ಕೇವಲ ಘೋಷಣೆ ಅಲ್ಲ, ಸಮಾಜ ಮತ್ತು ರಾಷ್ಟ್ರಕ್ಕಾಗಿ ಪ್ರತಿ ಕ್ಷಣ ಬದುಕುವ ಮನೋಭಾವ.

ಸಂಘದ ದೃಷ್ಟಿಯಲ್ಲಿ ರಾಷ್ಟ್ರಭಕ್ತಿ ಅಂದರೆ ಕೇವಲ ಗಡಿ ರಕ್ಷಣೆಯಲ್ಲ, ಸಮಾಜ ನಿರ್ಮಾಣದ ಚೇತನ — ‘ನಾವು ಏನು ಪಡೆಯಬಹುದು’ ಅಲ್ಲ, ‘ನಾವು ಏನು ನೀಡಬಹುದು’ ಎನ್ನುವುದು ಮುಖ್ಯ ಎಂದರು.

ಸಂಘದ ಉದ್ದೇಶ ರಾಜಕೀಯ ಶಕ್ತಿ ಅಲ್ಲ, ಸಾಮಾಜಿಕ ಪುನರ್‌ನಿರ್ಮಾಣ. ಡಾ. ಹೆಡ್ಗೇವಾರ್ ಹೇಳಿದ್ದಂತೆ, ಸಂಘ ಸಮಾಜದ ಆತ್ಮದಲ್ಲಿ ರಾಷ್ಟ್ರಭಾವನೆ ಮೂಡಿಸುವ ಕಾರ್ಯ ಮಾಡುತ್ತಿದೆ, ಸಂಘದ ಶತಮಾನೋತ್ಸವದ ಸಂದರ್ಭ ಕೇವಲ ಹಬ್ಬವಲ್ಲ, ಆತ್ಮಪರಿಶೀಲನೆಯ ಸಮಯವೂ ಆಗಿದೆ — ನಾವು ಸಮಾಜದ ವಿಶ್ವಾಸಕ್ಕೆ ಅರ್ಹರೇ?” ಎಂಬ ಪ್ರಶ್ನೆ ಪ್ರತಿಯೊಬ್ಬ ದೇಶಭಕ್ತನಿಗೂ ಮುಖ್ಯವಾಗಿದೆ, ಭಾರತ ಯಾವ ಧರ್ಮ, ಜಾತಿ ಅಥವಾ ವರ್ಗದ ಸೊತ್ತು ಅಲ್ಲ ಈ ಮಣ್ಣನ್ನು, ನೀರನ್ನು ಮತ್ತು ಸಂಸ್ಕೃತಿಯನ್ನು ಕಾಪಾಡಿದ ಎಲ್ಲರದ್ದಾಗಿದೆ. ಈ ತ್ಯಾಗ ಮತ್ತು ಸೇವೆಯ ಸಂಯೋಗವೇ ಭಾರತವನ್ನು ‘ಸನಾತನ ರಾಷ್ಟ್ರ’ವನ್ನಾಗಿ ಮಾಡಿದೆ ಎಂದು ಅರುಣ ಕುಮಾರ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande