ಜಾರ್ಜಿಯಾದಲ್ಲಿ ಸರ್ಕಾರದ ವಿರುದ್ಧ ತೀವ್ರಗೊಂಡ ಪ್ರತಿಭಟನೆ
ಟಿಬಿಲಿಸಿ, 05 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಜಾರ್ಜಿಯಾದಲ್ಲಿ ಚುನಾವಣೆಗಳಿಗೆ ಒತ್ತಾಯಿಸಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಶನಿವಾರ ಹಿಂಸಾತ್ಮಕ ತಿರುವು ಪಡೆದವು. ರಾಜಧಾನಿ ಟಿಬಿಲಿಸಿಯ ಅಟೋನೆಲ್ಲಿ ಬೀದಿಯಲ್ಲಿರುವ ಅಧ್ಯಕ್ಷೀಯ ಭವನದ ಭದ್ರತಾ ಕವಚ ಮುರಿದು ಆವರಣಕ್ಕೆ ನುಗ್ಗಲು ಸಾವಿರ
Protest


ಟಿಬಿಲಿಸಿ, 05 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಾರ್ಜಿಯಾದಲ್ಲಿ ಚುನಾವಣೆಗಳಿಗೆ ಒತ್ತಾಯಿಸಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಶನಿವಾರ ಹಿಂಸಾತ್ಮಕ ತಿರುವು ಪಡೆದವು.

ರಾಜಧಾನಿ ಟಿಬಿಲಿಸಿಯ ಅಟೋನೆಲ್ಲಿ ಬೀದಿಯಲ್ಲಿರುವ ಅಧ್ಯಕ್ಷೀಯ ಭವನದ ಭದ್ರತಾ ಕವಚ ಮುರಿದು ಆವರಣಕ್ಕೆ ನುಗ್ಗಲು ಸಾವಿರಾರು ಪ್ರತಿಭಟನಾಕಾರರು ಯತ್ನಿಸಿದರು. ಭದ್ರತಾ ಸಿಬ್ಬಂದಿ ಅಶ್ರುವಾಯು, ಮತ್ತು ನೀರಿನ ಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಆಂತರಿಕ ವ್ಯವಹಾರಗಳ ಸಚಿವಾಲಯ ಹಿಂಸಾತ್ಮಕ ಘಟನೆಗಳ ಕುರಿತು ತನಿಖೆ ಆರಂಭಿಸಿದ್ದು, ಪ್ರತಿಭಟನಾಕಾರರ ವಿರುದ್ಧ ಹಲವು ಅಪರಾಧ ವಿಭಾಗಗಳಡಿ ಪ್ರಕರಣ ದಾಖಲಿಸಲಾಗಿದೆ.

ಉಪ ಸಚಿವ ಅಲೆಕ್ಸಾಂಡ್ರೆ ಡಾರ್ಕವೆಲಿಡ್ಜ್ ಅವರ ಪ್ರಕಾರ, ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿ, ಸಾಂವಿಧಾನಿಕ ಕ್ರಮ ಉರುಳಿಸಲು ಕರೆ ನೀಡಿದ್ದರು. ಈ ಹಿಂಸಾಚಾರದಲ್ಲಿ 14 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಪ್ರಧಾನ ಮಂತ್ರಿ ಇರಾಕ್ಲಿ ಕೊಬಾಖಿಡ್ಜೆ ಪ್ರತಿಭಟನಾಕಾರರ ಮೇಲೆ ತೀವ್ರ ಕಿಡಿ ಕಾರಿದ್ದು, “ಯುರೋಪಿಯನ್ ಒಕ್ಕೂಟದ ಧ್ವಜಗಳನ್ನು ಹೊತ್ತಿದ್ದ ಗಲಭೆಕೋರರು ಅಧ್ಯಕ್ಷೀಯ ಭವನದ ಹೊರಗಿನ ಬ್ಯಾರಿಕೇಡ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ದೇಶದ ಸಾಂವಿಧಾನಿಕ ಕ್ರಮವನ್ನು ಅಸ್ಥಿರಗೊಳಿಸಲು ಮಾಡಲಾದ ಪ್ರಯತ್ನ” ಎಂದು ಆರೋಪಿಸಿದರು.

ಪ್ರತಿ ಪಕ್ಷಗಳು ಹೊಸ ಸಂಸತ್ ಚುನಾವಣೆ ಮತ್ತು ಕೈದಿಗಳ ಬಿಡುಗಡೆಗೆ ಒತ್ತಾಯಿಸುತ್ತಿದ್ದು, ಕಳೆದ 311 ದಿನಗಳಿಂದ ಟಿಬಿಲಿಸಿಯ ಫ್ರೀಡಂ ಸ್ಕ್ವೇರ್‌ನಲ್ಲಿ ಪ್ರತಿಭಟನೆ ಮುಂದುವರಿದಿದೆ. ಶನಿವಾರ ಫ್ರೀಡಂ ಸ್ಕ್ವೇರ್ ಮತ್ತು ರುಸ್ತವೇಲಿ ಅವೆನ್ಯೂಗಳಿಂದ ಅಧ್ಯಕ್ಷೀಯ ಭವನದವರೆಗೆ ಭಾರಿ ಮೆರವಣಿಗೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande