ಮಧ್ಯಪ್ರದೇಶಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಭೇಟಿ
ಮೈಹಾರ್, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಮಧ್ಯಪ್ರದೇಶಕ್ಕೆ ಎರಡು ದಿನಗಳ ಭೇಟಿಗಾಗಿ ಶನಿವಾರ ಬೆಳಿಗ್ಗೆ ಮೈಹಾರ್‌ಗೆ ಆಗಮಿಸಿ ಪ್ರಸಿದ್ಧ ಮಾ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ದೇವಾಲಯವನ್ನು ಶಕ್ತಿ ಪೀಠವೆಂದು ಪರಿಗಣಿಸಲಾಗುತ್ತದೆ ಮತ್ತು
Rss


ಮೈಹಾರ್, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ಮಧ್ಯಪ್ರದೇಶಕ್ಕೆ ಎರಡು ದಿನಗಳ ಭೇಟಿಗಾಗಿ ಶನಿವಾರ ಬೆಳಿಗ್ಗೆ ಮೈಹಾರ್‌ಗೆ ಆಗಮಿಸಿ ಪ್ರಸಿದ್ಧ ಮಾ ಶಾರದಾ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ದೇವಾಲಯವನ್ನು ಶಕ್ತಿ ಪೀಠವೆಂದು ಪರಿಗಣಿಸಲಾಗುತ್ತದೆ ಮತ್ತು ಭಕ್ತರಿಗೆ ವಿಶೇಷ ನಂಬಿಕೆಯ ಕೇಂದ್ರವಾಗಿದೆ. ದರ್ಶನದ ನಂತರ ಅವರು ಉಟೇಲಿ ಪ್ರದೇಶದಲ್ಲಿ ರಾಜ್ಯಮಟ್ಟದ ವಿಸ್ತರಣಾ ತರಗತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಾದ್ಯಂತದಿಂದ ಆಗಮಿಸಿರುವ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಭಾಗವತ್ ಅವರ ಎರಡನೇ ದಿನ, ಅಕ್ಟೋಬರ್ 5 ರಂದು, ಸತ್ನಾದ ಸಿಂಧಿ ಶಿಬಿರದಲ್ಲಿರುವ ಬಾಬಾ ಮೆಹರ್ಶಾ ದರ್ಬಾರ್ ಸಾಹಿಬ್ ಮತ್ತು ಬಿಟಿಐ ಮೈದಾನದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಭಾಗವತ್ ಭೇಟಿ ಹಿನ್ನೆಲೆಯಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande