ನವದೆಹಲಿ, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇರಳದ ವಯನಾಡಿನ ಭೀಕರ ನೈಸರ್ಗಿಕ ದುರಂತದ ಪರಿಹಾರ ವಿತರಣೆ ಕುರಿತು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇಂದ್ರದ ಪರಿಹಾರ ನಿಧಿಗಳು ಅಸಮರ್ಪಕವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರವು ಭೂಕುಸಿತದ ಪುನರ್ನಿರ್ಮಾಣಕ್ಕೆ ₹2,221 ಕೋಟಿ ಕೇಳಿದ್ದರೂ, ಕೇಂದ್ರವು ₹260 ಕೋಟಿ ಮಾತ್ರ ಮಂಜೂರಾಗಿದೆ. ನಿವಾಸ, ಜೀವನೋಪಾಯ ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ಜನರಿಗೆ ಕೇಂದ್ರ ಸರಕಾರ ರಾಜಕೀಯದ ಬದಲು ತಕ್ಷಣದ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa