ಭೋಪಾಲ್, 04 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಛಿಂದ್ವಾಡಾ ಜಿಲ್ಲೆಯ ಪರಾಸಿಯಾ ಬ್ಲಾಕ್‌ನಲ್ಲಿ ಕೋಲ್ಡ್ರಿಫ್ ಕಫ್ ಸಿರಪ್ ಕುಡಿದ 9 ಮಕ್ಕಳು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಸಿರಪ್ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದ್ದು, ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನೇಮಿಸಿದ್ದಾರೆ.
ತಪಾಸಣೆಯಲ್ಲಿ ಸಿರಪ್‌ನಲ್ಲಿ ‘ಡೈಥೈಲೀನ್ ಗ್ಲೈಕಾಲ್’ ಎಂಬ ವಿಷಕಾರಿ ರಾಸಾಯನಿಕ ಮಿಶ್ರಣ ಕಂಡು ಬಂದಿದ್ದು, ಇದು ಮಕ್ಕಳ ಕಿಡ್ನಿಗೆ ಹಾನಿ ತರುವುದಾಗಿ ತಿಳಿದು ಬಂದಿದೆ.
ಘಟನೆ ತಿಳಿದ ತಕ್ಷಣ ತಮಿಳುನಾಡು ಸರ್ಕಾರವು ಸಂಬಂಧಿತ ಬ್ಯಾಚ್ SR–13 ನ ಉತ್ಪಾದನೆ ಮತ್ತು ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
1420 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಚಿಕಿತ್ಸೆಗಾಗಿ ಸರ್ಕಾರದ ಆಸ್ಪತ್ರೆಗಳಿಗೆ ಮಾತ್ರ ಕಳುಹಿಸಲು ಖಾಸಗಿ ಆಸ್ಪತ್ರೆಗಳಿಗೆ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa