ಗಾಜಾ ಶಾಂತಿ ಯೋಜನೆಗೆ ಹಮಾಸ್ ಒಪ್ಪಿಗೆ
ವಾಷಿಂಗ್ಟನ್, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪ್ಯಾಲೆಸ್ಟೀನಿಯನ್ ಮಿಲಿಟಿಯಾ ಸಂಘಟನೆ ಹಮಾಸ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಗಾಜಾ ಶಾಂತಿ ಯೋಜನೆಗೆ ಒಪ್ಪಿಗೆ ನೀಡಿದೆ. ಯೋಜನೆಯಡಿಯಲ್ಲಿ ಹಮಾಸ್, ಮೃತಪಟ್ಟವರನ್ನು ಸೇರಿ ಎಲ್ಲಾ 48 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸ
Peace


ವಾಷಿಂಗ್ಟನ್, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪ್ಯಾಲೆಸ್ಟೀನಿಯನ್ ಮಿಲಿಟಿಯಾ ಸಂಘಟನೆ ಹಮಾಸ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಗಾಜಾ ಶಾಂತಿ ಯೋಜನೆಗೆ ಒಪ್ಪಿಗೆ ನೀಡಿದೆ. ಯೋಜನೆಯಡಿಯಲ್ಲಿ ಹಮಾಸ್, ಮೃತಪಟ್ಟವರನ್ನು ಸೇರಿ ಎಲ್ಲಾ 48 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿದೆ.

ಹಮಾಸ್ ನೀಡಿದ ಹೇಳಿಕೆಯ ನಂತರ ಟ್ರಂಪ್ “ಅವರು ಶಾಶ್ವತ ಶಾಂತಿಗೆ ಸಿದ್ಧ” ಎಂದು ಪ್ರತಿಕ್ರಿಯಿಸಿದ್ದು, ಇಸ್ರೇಲ್ ಗಾಜಾದ ಮೇಲಿನ ಬಾಂಬ್ ದಾಳಿಯನ್ನು ತಕ್ಷಣ ನಿಲ್ಲಿಸಲು ಸೂಚಿಸಿದ್ದಾರೆ. ಹಮಾಸ್ ಮಧ್ಯವರ್ತಿಗಳ ಮೂಲಕ ತಕ್ಷಣದ ಮಾತುಕತೆಗಳಿಗೆ ಸಿದ್ಧತೆಯನ್ನೂ ತೋರಿಸಿದೆ.

ಶಾಂತಿ‌ ಮಾತುಕತೆ ಒಪ್ಪಂದಗಳು;

ಇಸ್ರೇಲ್ ಗಾಜಾದಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುತ್ತದೆ ಮತ್ತು ಹಂತ ಹಂತವಾಗಿ ಹಿಂತೆಗೆದುಕೊಳ್ಳುತ್ತದೆ.

ಹಮಾಸ್ 72 ಗಂಟೆಗಳೊಳಗೆ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ.

ಇಸ್ರೇಲ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 250 ಪ್ಯಾಲೆಸ್ಟೀನಿಯನ್ ಕೈದಿಗಳನ್ನು, ಜೊತೆಗೆ 1,700 ಗಾಜಾ ನಿವಾಸಿಗಳನ್ನು ಬಿಡುಗಡೆ ಮಾಡುತ್ತದೆ.

ಗಾಜಾಗೆ ಪ್ರತಿದಿನ 600 ಟ್ರಕ್‌ಲೋಡ್ ಮಾನವೀಯ ನೆರವು ತಲುಪುತ್ತದೆ.

ಹಮಾಸ್ ತನ್ನ ಆಡಳಿತ ಹಾಗೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಗಾಜಾದ ನಿಯಂತ್ರಣವನ್ನು ಸ್ವತಂತ್ರ ಪ್ಯಾಲೆಸ್ಟೀನಿಯನ್ ತಾಂತ್ರಿಕ ತಜ್ಞರ ಸಮಿತಿಗೆ ಹಸ್ತಾಂತರಿಸುತ್ತದೆ.

ಎಲ್ಲಾ ಭಯೋತ್ಪಾದಕ ಸುರಂಗಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳನ್ನು ಕೆಡವಲಾಗುತ್ತದೆ.

ಗಾಜಾವನ್ನು ಭಯೋತ್ಪಾದನಾ ಮುಕ್ತ ವಲಯವೆಂದು ಘೋಷಿಸಿ, ಅಂತರರಾಷ್ಟ್ರೀಯ ಸಮಿತಿಯ ಮೇಲ್ವಿಚಾರಣೆಯಲ್ಲಿ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳುತ್ತವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande