ಎಚ್‌ಪಿಝಡ್ ಕ್ರಿಪ್ಟೋ ಟೋಕನ್ ವಂಚನೆ ಪ್ರಕರಣ : ಐವರನ್ನು ಬಂಧಿಸಿದ ಸಿಬಿಐ
ನವದೆಹಲಿ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸೈಬರ್ ಅಪರಾಧಗಳ ವಿರುದ್ಧದ ಆಪರೇಷನ್ ಚಕ್ರ-ವಿ ಕಾರ್ಯಾಚರಣೆಯಡಿ ಎಚ್‌ಪಿಝಡ್ ಕ್ರಿಪ್ಟೋ ಟೋಕನ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ-ಎನ್‌ಸಿಆರ್, ಹೈದರಾಬಾದ್ ಮತ್ತು ಬೆಂಗಳೂರಿನ ಏಳು ಸ್ಥಳಗಳಲ್ಲಿ ದಾಳಿ ನಡೆಸಿ ಐದು ಮಂದಿಯನ್ನು ಬಂಧ
Cbi


ನವದೆಹಲಿ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸೈಬರ್ ಅಪರಾಧಗಳ ವಿರುದ್ಧದ ಆಪರೇಷನ್ ಚಕ್ರ-ವಿ ಕಾರ್ಯಾಚರಣೆಯಡಿ ಎಚ್‌ಪಿಝಡ್ ಕ್ರಿಪ್ಟೋ ಟೋಕನ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ-ಎನ್‌ಸಿಆರ್, ಹೈದರಾಬಾದ್ ಮತ್ತು ಬೆಂಗಳೂರಿನ ಏಳು ಸ್ಥಳಗಳಲ್ಲಿ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿದೆ.

ಸಿಬಿಐ ನೀಡಿರುವ ಮಾಹಿತಿ ಪ್ರಕಾರ, 2021 ರಿಂದ 2023ರವರೆಗೆ ಕಾರ್ಯನಿರ್ವಹಿಸಿದ ಈ ಜಾಲದಲ್ಲಿ ವಿದೇಶಿ ವ್ಯಕ್ತಿಗಳು ಮತ್ತು ಭಾರತೀಯ ಪ್ರಜೆಗಳು ಸೇರಿ ಶೆಲ್ ಕಂಪನಿಗಳನ್ನು ರಚಿಸಿ, ಸಾಲ, ಉದ್ಯೋಗ, ಹೂಡಿಕೆ ಹಾಗೂ ಕ್ರಿಪ್ಟೋ ಯೋಜನೆಗಳ ಹೆಸರಿನಲ್ಲಿ ಸಾವಿರಾರು ನಾಗರಿಕರನ್ನು ವಂಚಿಸಿದ್ದರು. ಸಂಗ್ರಹಿಸಿದ ಹಣವನ್ನು ಮೊದಲು ಮ್ಯೂಲ್ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿ ಬಳಿಕ ಕ್ರಿಪ್ಟೋಕರೆನ್ಸಿ ಮೂಲಕ ವಿದೇಶಕ್ಕೆ ವರ್ಗಾಯಿಸಲಾಗುತ್ತಿತ್ತು‌ ಎಂದು ತಿಳಿಸಿದೆ.

ದಾಳಿಯ ವೇಳೆ ಸಿಬಿಐ ಡಿಜಿಟಲ್ ಪುರಾವೆಗಳು ಮತ್ತು ಹಣಕಾಸಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಂತಾರಾಷ್ಟ್ರೀಯ ಜಾಲ ಹಾಗೂ ಇತರ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande