ಕೇಂದ್ರದಿಂದ ಹಡಗು ನಿರ್ಮಾಣಕ್ಕೆ ₹24,736 ಕೋಟಿ ಪ್ರೋತ್ಸಾಹಕ ಪ್ಯಾಕೇಜ್
ನವದೆಹಲಿ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತದಲ್ಲಿ ಹಡಗು ನಿರ್ಮಾಣ ವಲಯವನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹24,736 ಕೋಟಿ ಪ್ರೋತ್ಸಾಹಕ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಯೋ
Boat


ನವದೆಹಲಿ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ ಹಡಗು ನಿರ್ಮಾಣ ವಲಯವನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹24,736 ಕೋಟಿ ಪ್ರೋತ್ಸಾಹಕ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಯೋಜನೆ 2026ರಿಂದ 2036ರ ವರೆಗೆ ಜಾರಿಯಲ್ಲಿರಲಿದ್ದು, ಹಡಗು ನಿರ್ಮಾಣ ಹಣಕಾಸು ನೆರವು ಯೋಜನೆ ಮತ್ತು ರಾಷ್ಟ್ರೀಯ ಹಡಗು ನಿರ್ಮಾಣ ಮಿಷನ್ ಅಡಿಯಲ್ಲಿ ಜಾರಿಗೆ ಬರಲಿದೆ.

ಈ ಯೋಜನೆಯ ಮೂಲಕ ಸುಮಾರು ₹96,000 ಕೋಟಿ ಮೌಲ್ಯದ ಹಡಗು ನಿರ್ಮಾಣ ಗುರಿ ಹೊಂದಲಾಗಿದ್ದು. ಜೊತೆಗೆ, ಹಡಗು ಒಡೆಯುವಿಕೆ ಮತ್ತು ಮರುಬಳಕೆ ವ್ಯವಸ್ಥೆಯಿಂದ ವೃತ್ತಾಕಾರದ ಆರ್ಥಿಕತೆಗೆ ಉತ್ತೇಜನ ಸಿಗಲಿದೆ ಎಂದು ಕೇಂದ್ರ ಬಂದರು,ಹಡಗು ಸಾಗಣೆ ಮತ್ತು ಜಲ ಮಾರ್ಗಗಳ ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande